ಕಬಕ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೯ ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಇಂತಿಯಾಜ್ ನಡೆಸಿ ಶುಭ ಸಂದೇಶ ಸಾರಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಸಾಬ. ಉಮರುಲ್ ಫಾರೂಕು ಮತ್ತು ಅಬ್ದುಲ್ ಅಝೀಝ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಪೋಷಕ ವೃಂದದವರು ಆಗಮಿಸಿದರು.

ಸಾಬರವರು ಮಾತನಾಡಿ ಸ್ವಾತಂತ್ರ್ಯ ಕ್ಕಾಗಿ ದುಡಿದ ಅನೇಕ ಗಣ್ಯರ ಬಲಿದಾನ ಹೋರಾಟದ ಫಲವಾಗಿ ಪರಕೀಯರ ದಬ್ಬಾಳಿಕೆಯಿಂದ ನಾವು ಮುಕ್ತ ಮುಕ್ತಿ ಹೊಂದಿದ ದಿನವಾಗಿದೆ ಅವರ ತ್ಯಾಗ ಧೈರ್ಯ ಶುದ್ದೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಎಂಬ ಕಿವಿ ಮಾತನ್ನು ಹೇಳಿದರು. ಉಮರುಲ್ ಫಾರೂಕ್ ಮಾತನಾಡಿ ನಮ್ಮ ದೇಶ ನಮ್ಮ ಜನ ಎಲ್ಲರೂ ಒಂದೇ ನಾವು ಹಿರಿಯರು ಬಿಟ್ಟು ಹೋದ ದಾರಿಯಲ್ಲಿ ನಡೆದರೆ ನಮಗೆ ಫಲ ಸಿಗುತ್ತದೆ ಮಕ್ಕಳಾದ ನಾವು ಹಿರಿಯರ ಮಾತುಗಳನ್ನು ಅನುಸರಿಸಿ ಗೌರವಿಸಿ ಶ್ರದ್ದೆಯಿಂದ ನಡೆದಾಗ ಜೀವನ ಸಾರ್ಥಕತೆಯಾಗುತ್ತದೆ ಎಂದು ತಿಳಿಸಿದರು. ಶಾಲಾ ಮುಖ್ಯಗುರು ಬಾಬು ಟಿ.ಕುಂಬ್ರರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here