ಆ.17: ಮುಂಬೈಯಲ್ಲಿ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ

0

ಪುತ್ತೂರು: ಮುಂಬಾಯಿಯ ವಾಶಿಯಲ್ಲಿರುವ ಸಿಡ್ಕೋ ಕಮ್ಯನಿಕೇಷನ್ ಸೆಂಟರ್‌ನಲ್ಲಿ ಶ್ರೀ ಮುಕಾಂಬಿಕ ದೇವಾಲಯದ ಪುನರ್ ನಿರ್ಮಾಣ ಹಾಗೂ ನೂತನ ಸಭಾ ಭವನ ನಿರ್ಮಾಣದ ನಿಧಿ ಸಂಗ್ರಹಣೆಗಾಗಿ ನಡೆಯುವ ಧರ್ಮೋತ್ಸವ ಕಾರ್ಯಕ್ರಮದ ಪ್ರಯುಕ್ತ ಕಲರ‍್ಸ್ ಕನ್ನಡ ಖ್ಯಾತಿಯ, ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ,ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಗಾಯಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಆ.17 ರಂದು ಸಂಜೆ 7 ರಿಂದ ಸಂಗೀತ ಗಾನಾಮೃತ ಕಾರ್ಯಕ್ರಮ ನಡೆಯಲಿದೆ.

ತಂಡದಲ್ಲಿ ಗಾಯಕಿಯರಾಗಿ ಜನ್ಯ ಪ್ರಸಾದ್ ಅನಂತಾಡಿ, ಮತ್ತು ಉಜ್ವಲ ಆಚಾರ್ ಮಂಕುಡೆ ಪಾಲ್ಗೊಳ್ಳಲಿದ್ದಾರೆ.ಕೀಬೊರ್ಡ್‌ನಲ್ಲಿ ಪ್ರಕಾಶ್ ಕುಂಬ್ಳೆ, ಮ್ಯಾಂಡಲಿನ್‌ನಲ್ಲಿ ದೇವರಾಜ್ ಆಚಾರ್ ಹೊಸಬೆಟ್ಟು, ಗಿಟಾರ್ ನಲ್ಲಿ ಶರತ್ ಹಳೆಯಂಗಡಿ,ತಬಲದಲ್ಲಿ ಶರತ್ ಪೆರ್ಲ,ರಿದಂಪ್ಯಾಡ್‌ನಲ್ಲಿ ರವಿಕಾಂತ್ ಕಾಸರಗೋಡು ಸಹಕರಿಸಲಿದ್ದು ಕೃಷ್ಣ ಪ್ರಸಾದ್ ಮಂಗಳೂರು ಕಾರ್ಯಕ್ರಮ ನಿರೂಪಿಸಲಿದ್ದಾರೆ.

LEAVE A REPLY

Please enter your comment!
Please enter your name here