ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ನಡೆದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತೀಯ ಭೂಸೇನೆಯ ಹವಾಲ್ದಾರ್ ಸಂತೋಷ್ ಗೌಡ ಇಚ್ಲಂಪಾಡಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಘೋಷಣೆಗಳ ಮೂಲಕ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾಭಿಮಾನಿಗಳು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಿದರು. ನಂತರ ಸ್ವಾತಂತ್ರ್ಯ ದಿನಾಚರಣೆಯ ಸಭಾಕಾರ್ಯಕ್ರವು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಗುರು ಎ.ಲಕ್ಷ್ಮಣ ಗೌಡರವರು ಪೂರ್ವ ಭಾರತದ ಇತಿಹಾಸ ಹಾಗೂ ಪ್ರಸ್ತುತ ಭಾರತದ ಸೇನೆಯಲ್ಲಿ ನಮ್ಮ ಸೈನಿಕರ ಪಾತ್ರದ ಬಗ್ಗೆ ವಿವರಿಸಿದರು.
ಅತಿಥಿಯಾಗಿದ್ದ ಭಾರತೀಯ ಭೂಸೇನೆಯ ಹವಾಲ್ದಾರ್ ಸಂತೋಷ್ ಗೌಡ ಇಚ್ಲಂಪಾಡಿ ಅವರು ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಸೈನಿಕರಾಗಿ ದೇಶ ಸೇವೆ ಮಾಡಲು ಸದಾ ಸಿದ್ಧರಾಗಿರಬೇಕೆಂದು ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿ ಪದ್ಮಯ್ಯ ಗೌಡ ಡೆಂಬಳೆ ಶುಭ ಹಾರೈಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಮಧುಶ್ರೀ ನೆಕ್ಕರೆ ಶುಭಹಾರೈಸಿದರು. ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ನೆಕ್ಕರಾಜೆ, ಸದಸ್ಯರಾದ ಸ್ಮಿತಾ ಪುಯಿಲ, ಕಾಂಚನ ವಿಕ್ರಮ ಯುವಕ ಮಂಡಲದ ಗೌರವಾಧ್ಯಕ್ಷ ಅನಿಲ್ ಪಿಂಟೋ, ಶಾಲಾ ಹಿರಿಯ ಶಿಕ್ಷಕರಾದ ರಾಜಶೇಖರಪ್ಪ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭೂಸೇನೆಯ ಸೈನಿಕ ಸಂತೋಷ್ ಗೌಡರಿಗೆ ಶಾಲಾ ವತಿಯಿಂದ ಗೌರವ ಸಮರ್ಪಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಸಭಾಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುವುದರ ಮೂಲಕ ಪ್ರಾರ್ಥಿಸಿದರು. ಕಂಪ್ಯೂಟರ್ ಶಿಕ್ಷಕಿ ಸೌಮ್ಯ ಬಿ.ವಿ ಸ್ವಾಗತಿಸಿ, ರಮ್ಯಶ್ರೀ ವಂದಿಸಿದರು. ಸಹಶಿಕ್ಷಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು.