
ರಾಮಕುಂಜ: ಕಡಬ ವಲಯ ಮಟ್ಟದ 17 ವಯೋಮಾನದ ಖೋ-ಖೋ ಪಂದ್ಯಾಟವು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆಯಲ್ಲಿ ಜರುಗಿತು. ಈ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಭರತ್, ಚಂದನ್, ಸತೀಶ್ ತರಬೇತಿ ನೀಡಿದ್ದರು. ಶಾಲಾ ಮುಖ್ಯಗುರು ಸತೀಶ್ ಭಟ್, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ಮಾರ್ಗದರ್ಶನ ನೀಡಿದ್ದರು.