ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಜೈನ ಧರ್ಮದ ಬಗ್ಗೆ ಅವಹೇಳನ, ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ಸದ್ಬುದ್ಧಿ ನೀಡಿ, ಸತ್ಯಕ್ಕೆ ಜಯ ದೊರಕಲಿ ಎಂದು ಇಲ್ಲಿನ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಆ.17ರಂದು ಪ್ರಾರ್ಥಿಸಲಾಯಿತು.

ಪುರೋಹಿತರಾದ ಸಂತೋಷ್‌ಕುಮಾರ್ ಇಂದ್ರ ಪ್ರಾರ್ಥನೆ ನೆರವೇರಿಸಿದರು. ಭರತ್‌ಕುಮಾರ್ ಆರಿಗ ಪಟ್ಟೆಗುತ್ತು, ಪ್ರಕಾಶ್ ಜೈನ್ ಕುಂಬುರುಗ, ವಿಜಯಕುಮಾರ್ ಜೈನ್, ಶ್ರೀಧರ ಹೆಗ್ಡೆ, ಜೀವಂದರ್ ಜೈನ್, ಅವಿನಾಶ್ ಜೈನ್ ಪರಂಗಾಜೆ, ಶ್ರೀಧರ ಶೆಟ್ಟಿ, ಅನೀಶ್ ಜೈನ್, ಕ್ಷಮೇತ್, ದ್ವಿತಂ, ಅಶೋಕ್ ಆರಿಗ, ಸುದರ್ಶನ್ ಜೈನ್, ಅಜಯ್ ಪಡಿವಾಳ್, ನರೇಶ್ ಜೈನ್, ಪ್ರಜ್ವಲ್ ಮಲ್ಲ, ಅಶೋಕ್ ಜೈನ್ ಬಾರಿಕೆ ಮತ್ತಿತರರು ಉಪಸ್ಥಿತರಿದ್ದರು.
ಖಂಡನಾ ಸಭೆ;
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಆ.16ರಂದು ಶಾಂತಿನಾಥ ಬಸದಿಯಲ್ಲಿ ಭಾರತೀಯ ಜೈನ್ ಮಿಲನ್ ಪುತ್ತೂರು ವಿಭಾಗದ ವತಿಯಿಂದ ಖಂಡನಾ ಸಭೆ ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರನ್ನು ಅವಾಚ್ಯವಾಗಿ ನಿಂದಿಸಿ ಅಪಪ್ರಚಾರ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕೊಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಶೋಕ್ ಕುಮಾರ್ ಆರಿಗ, ಸತೀಶ್ ಪಡಿವಾಳ್, ರಾಜೇಶ್ ಜೈನ್, ರಾಜಶೇಖರ ಜೈನ್, ಅತಿವೀರ್ ಜೈನ್, ಜೀವಂದರ್ ಜೈನ್, ಡಾ.ಅಶೋಕ್ ಪಡಿವಾಳ್, ನರೇಂದ್ರ ಪಡಿವಾಳ್ ಉಪಸ್ಥಿತರಿದ್ದರು.