ನಾರಿಯರಿಗೆ ಗೌರವ ಕೊಡುವ ಸದ್ಭಾವ ಬೆಳೆಯಬೇಕು : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಸ್ತ್ರೀಯರನ್ನು ನೋಡಿದಾಗ ಸಹೋದರಿ ಎನ್ನುವ ಭಾವನೆ ಒಡಮೂಡಬೇಕು. ನಾರಿಯರಿಗೆ ಗೌರವ ಕೊಡುವ ಸದ್ಭಾವ ಪುರುಷರಲ್ಲಿ ಬೆಳೆಯಬೇಕು. ರಕ್ಷೆಯಲ್ಲಿ ಕೇವಲ ಸೋದರತ್ವ ಮಾತ್ರವಲ್ಲದೆ ಒಗ್ಗಟ್ಟಿನ ಸಂದೇಶವೂ ಅಡಗಿದೆ. ನಾವೆಲ್ಲ ಒಂದೇ ಎನ್ನುವ ಐಕ್ಯತೆಯ ಸಂಕೇತವಾಗಿಯೂ ರಕ್ಷೆ ಕಾಣಿಸಿಕೊಳ್ಳುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಆಚರಿಸಲಾದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.
ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಉಪನ್ಯಾಸಕರು ಉಪನ್ಯಾಸಕೇತರ ವೃಂದ ಸಭೆಯಲ್ಲಿ ಉಪಸ್ಥಿತರಿದ್ದರು. ತದನಂತರ ಸರತಿ ಸಾಲಿನಲ್ಲಿ ವಿದ್ಯಾರ್ಥಿ ಸಹೋದರರಿಗೆ ವಿದ್ಯಾರ್ಥಿನಿಯರು ರಕ್ಷೆ ಕಟ್ಟಿ ಸಂಭ್ರಮಿಸಿದರು.
ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ, ಚಿಂತನ ವಂದಿಸಿದರು. ಮಾನ್ಯ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವಿಷ್ಣು ಪ್ರದೀಪ್ ಕಾರ್ಯಕ್ರಮ ನಡೆಸಿಕೊಟ್ಟರು.