ಪುತ್ತೂರು: ಬನ್ನೂರು ಕರ್ಮಲದಲ್ಲಿರುವ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಮಾಸಿಕ ತಾಳಮದ್ದಳೆ ಆ.19ರಂದು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಕುಸುಮಾಕರ ಆಚಾರ್ಯ ಹಳೆನೇರಂಕಿ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ ಭಾಗವಹಿಸಿದರು. ಕೌರವನಾಗಿ ಗುಂಡ್ಯಡ್ಕ ಈಶ್ವರ ಭಟ್, ಕೃಷ್ಣನಾಗಿ ಮಾಂಬಾಡಿ ವೇಣುಗೋಪಾಲ ಭಟ್, ಭೀಮನಾಗಿ ದುಗ್ಗಪ್ಪ ಯನ್, ದ್ರೌಪದಿಯಾಗಿ ಬಡೆಕ್ಕಿಲ ಚಂದ್ರಶೇಖರ ಭಟ್, ವಿದುರನಾಗಿ ಅಚ್ಯುತ ಪಾಂಗಣ್ಣಾಯ ಪಾತ್ರಗಳನ್ನು ಪೋಷಿಸಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಾಂಬಾಡಿ ವೇಣುಗೋಪಾಲ ಭಟ್ ಪ್ರಾಯೋಜಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ ದುಗ್ಗಪ್ಪ ಯನ್ ವಂದಿಸಿದರು.