ಪುತ್ತೂರು: ಮಹಿಳಾ ಕಾಂಗ್ರೆಸ್‌ನ ಮಂಗಳೂರು ಗ್ರಾಮಾಂತರ ಅಧ್ಯಕ್ಷೆ ಉಷಾ ಅಂಚನ್ ಹಾಗೂ ಮಂಗಳೂರು ನಗರದ ಅಧ್ಯಕ್ಷ ಅಪ್ಪಿರವರ ಪದ ಗ್ರಹಣವು ಆ.19ರಂದು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆರವೇರಿತು.
ರಾಜ್ಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಸೌಮ್ಯ ರೆಡ್ಡಿಯವರು ಪದಗ್ರಹಣ ಸಮಾರಂಭ ನಡೆಸಿಕೊಟ್ಟರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ವಿಶ್ವಜೀತ್ ಹಾಗೂ ಮಹಿಳಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಪ್ರಧಾನ ಕಾರ್ಯದರ್ಶಿ ಪ್ರತಿಮಾ ಜಯರಾಮ್ ರೈ ಹಾಗೂ ಬ್ಲಾಕ್ ಸಂಘಟನಾ ಕಾರ್ಯದರ್ಶಿ ಚಂದ್ರಕಲಾ, ವಿನಯ ವಸಂತ್ ಹಾಗೂ ಮೊದಲಾದವರು ಭಾಗವಹಿಸಿದ್ದರು.