ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಸಾರಥ್ಯದಲ್ಲಿ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ  ತಾಲೂಕು ಮಟ್ಟದಲ್ಲಿ ಪ್ರಥಮ ಬಾರಿಗೆ” ಹರ್ ಸ್ಕೂಲ್ ಮಂದಿರ್ ಘರ್ ತಿರಂಗಾ,”. ಸುಳ್ಯ ಪದವು 79 ನೇ ಸ್ವಾತಂತ್ರೋತ್ಸವ 

0

  ಬಡಗನ್ನೂರುಃ ಸರ್ವೋದಯ ವಿದ್ಯಾ ಸಂಸ್ಥೆಗಳ ಸಾರಥ್ಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಾದ ಅಂಗನವಾಡಿ ಕೇಂದ್ರ ,ಶ್ರೀ ಅಯ್ಯಪ್ಪ ಭಜನಾ ಮಂದಿರ_ ಶ್ರೀ ಆಯುಧ ಪೂಜಾ ಸೇವಾ ಸಮಿತಿ ,ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕ ಸಂಘ, ರಿಪೈಯ್ಯ ಮಸೀದಿ ಕಮಿಟಿ ,ಸ್ವಾಮಿ ಕೊರಗಜ್ಜ ಸೇವಾ ಸಮಿತಿ ,ಯುವಶಕ್ತಿ ಕಲಾ ಮತ್ತು ಕ್ರೀಡಾ ಸಂಘ, ಶ್ರೀ ಮಹಾಲಕ್ಷ್ಮಿ ಭಜನಾ ಸಂಘ, ಹಿಂದೂ ಜಾಗರಣ ವೇದಿಕೆ ,ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘ, ಇಂದಾಜೆ ಟವರ್ಸ್,  ಸಂಜೀವ ಪೂಜಾರಿ ಮರದ ಮೂಲೆ , ಪುರಂದರ ಸುಳ್ಯಪದವು,  ನಿವೃತ್ತ ಅರಣ್ಯಾಧಿಕಾರಿ ಚಿನ್ನಪ್ಪ ಗೌಡ ಶಬರಿ ನಗರ , ಸುಂದರ ಪೂಜಾರಿ ಶಬರಿ ನಗರ ಇವರ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರೋತ್ಸವವನ್ನು ಈ ಭಾಗದ ಎಲ್ಲಾ ಧರ್ಮದವರು ,ಜಾತೀಯವರು ಸೇರುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಜಿಲ್ಲೆಗೆ ಮಾದರಿ  ಕಾರ್ಯಕ್ರಮವೇನಿಸಿಕೊಂಡಿದೆ. .ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳು, ಬೆಂಗಳೂರು ಉದ್ಯಮಿಗಳೂ ಆಗಿರುವ ಸತ್ಯಾನಂದ ನಿಧಿಯಡ್ಕರವರು ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ನೆರವೇರಿಸಿ ಮಾತನಾಡಿ ಈ ದಿನ ಸುಳ್ಯ ಪದವು ಪರಿಸರದಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು ಇಡೀ ನಾಡಿಗೆ ಶೋಭೆ ತರುವಂತಹ ವಿಚಾರ ಮುಂದೆಯೂ ನಾವೆಲ್ಲರೂ ಒಗ್ಗಟ್ಟಿನಿಂದ ರಾಷ್ಟ್ರ ಕಟ್ಟೋಣ ಎಂದು ಹೇಳಿ ಶುಭ ಹಾರೖೆಸಿದರು.

 ಬಳಿಕ ಹರ್ ಸ್ಕೂಲ್ ಮಂದಿರ್ ಘರ್ ತಿರಂಗಾ ಯಾತ್ರೆಯನ್ನು  ಪ್ರಭಾಕರ ಕಲ್ಲುರಾಯ ಬನದಗದ್ದೆ ಹಾಗೂ  ಅನ್ವರ್ ಪಾಳೆ ಕೊಚ್ಚಿ ರವರುಗಳು ಭಾರತಾಂಬೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಶುಭ ಹಾರೖೆಸಿದರು.

ಅನಂತರ ಯಾತ್ರೆಯು ಅಂಗನವಾಡಿ ಕೇಂದ್ರವನ್ನು ತಲುಪಿ ಅಂಗನವಾಡಿ ಶಿಕ್ಷಕಿ ರಮಾಕಾಂತಿ ರೈ ಇವರ ಮಾರ್ಗದರ್ಶನದಲ್ಲಿ ಬಡಗನೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಕನ್ನಡ್ಕ ಧ್ವಜಾರೋಹಣ ನೆರವೇರಿಸಿದರು. ಮುಂದೆ  ಶ್ರೀ ಅಯ್ಯಪ್ಪ ಭಜನಾ ಮಂದಿರಲ್ಲಿ ಪತಿ ಭಟ್  ಧ್ವಜಾರೋಹಣ ನೆರವೇರಿಸಿದರು ದಿನದ ಮಹತ್ವದ ಬಗ್ಗೆ ಮಾತನಾಡಿದರು. ‌ತದನಂತರ ತಿರಂಗ ಯಾತ್ರೆಯು ಸುಳ್ಯ ಪದ ವಿನ ಹೃದಯ ಭಾಗದಲ್ಲಿ ಆಯುಧ ಪೂಜಾ ಸೇವಾ ಅಧ್ಯಕ್ಷ   ಗಿರೀಶ್ ಕುಮಾರ್ ಕನ್ನಡ್ಕಇವರ ಸಾರಥ್ಯದಲ್ಲಿ  ಅಬ್ದುಲ್ ರಹಿಮಾನ್ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟು, ದಿನದ ಮಹತ್ವದ ಬಗ್ಗೆ  ಚಿನ್ನಪ್ಪ ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ವೋದಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮೂಡಿ ಬಂದ ಸಿಂಧೂರ ಎಂಬ ರೂಪಕ ಜನರನ್ನು ಆಕರ್ಷಿಸಿತು. ಮುಂದೆ  ಸಂಜೀವ ಪೂಜಾರಿ ಮರದ ಮೂಲೆ ಹಾಗೂ  ಪುರಂದರ ಸುಳ್ಯ ಪದವು ಇವರ ಮನೆಯಂಗಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಾರಿಸಲಾಯಿತು. ಬಳಿಕ ವಿದ್ಯಾರ್ಥಿಗಳ ಸಾರ್ವಜನಿಕರ ಘೋಷಣೆಯೊಂದಿಗೆ ರಿಪ್ಪಯ್ಯ ಮಸೀದಿ ಕಮಿಟಿ ಸಹಯೋಗದಲ್ಲಿ ಮಸೀದಿಯಲ್ಲಿ  ಮಹಮ್ಮದ್ ಬಡಗನೂರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ  ಇಂತಹ ತಿರಂಗಯಾತ್ರೆಯೂ ತಾಲೂಕು ಮಟ್ಟದಲ್ಲಿ ಪ್ರಪ್ರಥಮ ಬಾರಿ ನಡೆಯುತ್ತಿದೆ .ವಿದ್ಯಾರ್ಥಿಗಳಲ್ಲಿ ಪರಸ್ಪರ ಸಹಕಾರ ಮನೋಭಾವನೆ ಸಾಮರಸ್ಯ ಮೂಡಿಸಲು ಮಾದರಿ ಕಾರ್ಯಕ್ರಮವಾಗಿದೆ ಎಂದರು .ಮುಂದೆ ತಿರಂಗಾ ಯಾತ್ರೆಯು  ಚಿನ್ನಪ್ಪ ಗೌಡ ಶಬರಿನಗರ ಹಾಗೂಸುಂದರ ಪೂಜಾರಿ ಇವರ ಮನೆಯಲ್ಲಿ ಧ್ವಜಾರೋಹಣ ನಡೆಸಿ ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀರಾಮಣ್ಣಗೌಡ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಬಳಿಕ ಶಬರಿನಗರ  ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ ತೆರಳಿ ಶಬರಿನಗರ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಪರವಾಗಿ  ಪತ್ರಕರ್ತ  ಮಾಧವ ನಾಯಕ್ ಇಂದಾಜೆ ರವರು  ಧ್ವಜಾರೋಹಣ ನೆರವೇರಿಸಿ ಮಾತನಾಡಿ,  ಯಾತ್ರೆಯ ಅತ್ಯಂತ ಯಶಸ್ವಿಯಾಗಿದ್ದು ಮುಂದಿನ ಸಮಾಜಕ್ಕೆ ಒಂದು ಮಾದರಿ ಸಂಘಟನೆಯಾಗಿದೆ ಎಂದು ಹೇಳಿದರು.

ತಿರಂಗ ಯಾತ್ರೆಯಲ್ಲಿ 10 ಕಡೆ ತ್ರಿವರ್ಣ ಧ್ವಜಾರೋಹಣ,
ಇಡೀ ತಿರಂಗ ಯಾತ್ರೆಯಲ್ಲಿ 10 ಕಡೆ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರೀಯ ಹಬ್ಬವನ್ನು ಬಹಳಷ್ಟು ವಿಜ್ನಂಬನೆಯಿಂದ ಆಚರಿಸಲಾಯಿತು .ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸುಖೇಶ್ ರೈ ಎನ್, ಶಿಕ್ಷಕ ವೃಂದದವರು, ಸಂಸ್ಥೆಯ ಸಂಚಾಲಕರಾದ  ಮಹದೇವ ಭಟ್ಟ ಕೊಲ್ಯ ನಿರ್ದೇಶಕರುಗಳಾದ  ಸುಬ್ರಮಣ್ಯ ಭಟ್  ಬೀರಮೂಲೆ , ರಾಮಣ್ಣಗೌಡ ಬಸವನ ಹಿತ್ತಿಲು,  ಪ್ರದೀಪ್ ಕುಮಾರ್ ಕನ್ನಡ್ಕ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳಾದ ಆನಂದ ಪಾದೆ ಗದ್ದೆ,  ಅಬ್ದುಲ್ ಖಾದರ್, ವಿದ್ಯಾರ್ಥಿಗಳ ಸುರಕ್ಷಾ ಸಮಿತಿಯ ಅಧ್ಯಕ್ಷ  ಪ್ರಕಾಶ್ ಚಂದ್ರ ಮರದ ಮೂಲೆ  ಗಿರಿಧರ ಮಣಿಯಾಣಿ,  ಬಡಗನ್ನೂರು ಗ್ರಾ. ಪಂ  ಮಾಜಿ ಉಪಾಧ್ಯಕ್ಷ  ಗಂಗಾಧರ ಎನ್.ಜಿ, ಹ್ಯಾರಿಸ್ ಸುಳ್ಯ ಪದವು , ಸದಾನಂದ ರೈ ಬೋಳ ಕೂಡ್ಲು , ಭಾಸ್ಕರ್ ಹೆಗಡೆ,  ಶೇಷಪ್ಪ ಪೂಜಾರಿ ಕಡಮಗದ್ದೆ  ಸುಧೀರ್ ನಾಯಕ್ ಇಂದಾಜೆ , ವಿನಯಕುಮಾರ್ ಬೋಳುಗುಡ್ಡೆ, ಬಾಬು ಪೂಜಾರಿ ಮಡ್ಯೋಟ್ಟು ತರವಾಡು,  ಸುಶೀಲ ಕನ್ನಡ್ಕ,  ರೂಪ ಪಧಡ್ಕ  ಪ್ರಿಯ,  ಶುಭಲತಾ,  ಅನಿತಾ  ಶಶಿಕಲಾ  ಪ್ರೇಮ ಯುವ ಶಕ್ತಿ ಕಲಾ ಮತ್ತು ಕ್ರೀಡಾ ಸಂಘ , ಹಿಂದೂ ಜಾಗರಣ ವೇದಿಕೆಯ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

ದಾನಿಗಳಿಂದ ಕೊಡುಗೆ
 ಚನಿಯಪ್ಪ ನಾಯ್ಕ ಮತ್ತು ಮನೆಯವರು ನಿಧಿಯಡ್ಕ ಸಂಸ್ಥೆಗೆ ಎಲ್ಲಾ ಕಾರ್ಯಕ್ರಮಗಳ ಚಿತ್ರೀಕರಣಕ್ಕಾಗಿ 50 ಸಾವಿರ ರೂಪಾಯಿಯ ಡ್ರೋನ್ ಕ್ಯಾಮರವನ್ನು ಕೊಡುಗೆ ನೀಡಿದರು .ಸಂಸ್ಥೆಯ ಪೋಷಕರಾದ ಸದಾನಂದ ಆಚಾರ್ಯ ಕಕ್ಕೆ ಬೆಟ್ಟು ಇವರು ವಿದ್ಯಾರ್ಥಿಗಳಿಗೆ ಪೇಪರ್ ಓದುವುದಕ್ಕಾಗಿ ಹಾಗೂ ಸಭಾ ಕಾರ್ಯಕ್ಕಾಗಿ ಒಂದು ವೇದಿಕೆಯನ್ನು ನೀಡಿದರು .ವಿದ್ಯಾರ್ಥಿಗಳ ಊಟದ ತಟ್ಟೆಗಳ ವಿತರಣೆಗಾಗಿ ಎರಡು ಟ್ರಾಲಿಯನ್ನು  ಪ್ರಕಾಶ್ ಚಂದ್ರ ಮರದ ಮೂಲೆ,  ಬಾಬು ನಾಕೂರು ಹಾಗೂ  ಆನಂದ ಪಾದೆ ಗದ್ದೆ  ನೀಡಿದರು ,ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ದಿವಂಗತ ದಾಮೋದರ ಮಣಿಯಾಣಿ ಇವರ ಸ್ಮರಣಾರ್ಥ ಇವರ ಮಕ್ಕಳಾದ  ಶಿವಪ್ರಸಾದ್ ಮತ್ತು  ಪ್ರೀತಾಸಂದೇಶ್ ನೀಡಿ ,ಸಂಸ್ಥೆಗೆ ರೂಪಾಯಿ ಹತ್ತು ಸಾವಿರ ರೂಪಾಯಿಯನ್ನು ದೇಣಿಗೆಯನ್ನು ನೀಡಿದರು  ಶಿಕ್ಷಕ ವೃಂದದವರು  ಅಡುಗೆ ಸಿಬ್ಬಂದಿ ವರ್ಗ  ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here