ಪುತ್ತೂರು: ಬ್ಲಡ್‌ಬ್ಯಾಂಕ್ ಬಳಿಯಿರುವ ಅನುರಾಗವಠಾರದಲ್ಲಿ 40ನೇ ವರ್ಷದ ಅಷ್ಟಮಿ ಆಚರಣೆ ಹಾಗೂ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ನಡೆಯಿತು.
ಬೆಳಿಗ್ಗೆ ನಡೆದ ಸ್ವಾತಂತ್ರೋತ್ಸವದಲ್ಲಿ ಪ್ರಿಯ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಕರ್ನಾಟಕ ಸಂಘ ಹಾಗೂ ಇನ್ನಿತರ ಕಾರ್ಮಿಕ ಸಂಘದ ಮುಖ್ಯಸ್ಥ ಬಿ. ಪುರಂದರ ಭಟ್ ಮಾತನಾಡಿ, ನೂರು ವರ್ಷ ಒದ್ದಾಡಿ ಸ್ವಾತಂತ್ರ್ಯ ಪಡೆದಿದ್ದೇವೆ, ಇನ್ನೆಷ್ಟು ದಿನಗಳು ಒದ್ದಾಡಬೇಕು ಗೊತ್ತಿಲ್ಲ. ಅಂದಶ್ರದ್ಧೆ ಮತ್ತು ಅಸ್ವಾತಂತ್ರ್ಯ ಮನಸ್ಥಿತಿಯಿಂದ ಬದುಕುತ್ತಿದ್ದೇವೆ. ನಮ್ಮ ಬಗ್ಗೆ ನಾವು ತಿಳಿದುಕೊಂಡು ನಮಗೆ ತಿಳಿಯದೆ ಇದ್ದ ವಿಷಯವನ್ನು ತಿಳಿದವರಲ್ಲಿ ಕೇಳಿ ತಿಳಿದುಕೊಂಡು ಉತ್ತಮ ಜೀವನ ನಡೆಸಬೇಕೆಂದು ಹೇಳಿದರು.
ನವ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಸಲಹೆಗಾರ ಕೆ ಜಯರಾಮ ಕುಲಾಲ್, ನವ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಪೂಜಾರಿ ಮುಕ್ವೆ, ಕಾರ್ಯಧ್ಯಕ್ಷ ಎಮ್ ಶೇಷಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿ ಮೋಹನ ಆಚಾರ್ಯ ಪುರುಷರಕಟ್ಟೆ, ಕೋಶಾಧಿಕಾರಿ ಈಶ್ವರ ನಾಯ್ಕ ಅಜಲಾಡಿ, ಉಪಾಧ್ಯಕ್ಷರಾದ ಜಗದೀಶ್ ಕಲ್ಮಡ್ಕ, ವಿಶ್ವನಾಥ ಗೌಡ ಬೆಳ್ಳಿಪ್ಪಾಡಿ, ಜೊತೆ ಕಾರ್ಯದರ್ಶಿ ಚೆನ್ನಪ್ಪ ಮಚ್ಚಿಮಲೆ ಕರ್ನಾಟಕ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ರೈ ಸಲಹೆಗಾರ ಗಿರೀಶ್ ಗಿರೀಶ್ ನಾಯ್ಕ ಸೊರಕೆ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಎ. ಸೇರಿದಂತೆ ಹಲವು ಮಂದಿ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆ ಜಯರಾಮ್ ಕುಲಾಲ್ ಸ್ವಾಗತಿಸಿ, ಸಲಹೆಗಾರಎಂ.ಶೇಷಪ್ಪ ಕುಲಾಲ್ ವಂದಿಸಿದರು. ನಂತರ ನಡೆದ ಅನುರಾಗ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಶಾಂತಿಗೋಡು ಲಕ್ಷ್ಮೀಶ ತೋಳ್ಪಾಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಗತ್ತಿನಲ್ಲಿ ಮನುಷ್ಯನಿಗೆ ಇರುವ ಸಮಸ್ಯೆ ಯಾವುದೇ ಪ್ರಾಣಿ-ಪಕ್ಷಿಗಳಿಗೆ ಇರುವುದಿಲ್ಲ. ಪ್ರಾಣಿ-ಪಕ್ಷಿಗಳು ಯಾವುದೇ ಔಷಧವನ್ನು ತೆಗೆದುಕೊಳ್ಳಲು ಯಾರು ತಿಳಿಸುವುದಿಲ್ಲ ಅದು ತನಗೆ ತಾನೇ ತೆಗೆದುಕೊಳ್ಳುತ್ತವೆ ಹಾಗೂ ಗೂಡು ಕಟ್ಟಲು ಯಾರು ತಿಳಿಸಿ ಕೊಡುವುದಿಲ್ಲ. ಆದರೂ ಕೂಡ ಸುಂದರವಾದ ಗೂಡು ಕಟ್ಟಿ ಜೀವಿಸುತ್ತವೆ. ಆದರೆ ಮನುಷ್ಯನಿಗೆ ಮಾತ್ರ ಎಲ್ಲವನ್ನೂ ಬೇರೆಯವರು ತಿಳಿಸಿಕೊಡಬೇಕಾಗುತ್ತದೆ. ಮನುಷ್ಯನಿಗೆ ಏನು ಮಾಡಬೇಕು, ಯಾವ ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಗೊತ್ತಿಲ್ಲ. ಇದಕ್ಕೆ ನಾನು ಮತ್ತೆ ಮತ್ತೆ ಬರುತ್ತೇನೆ ಎಂದು ಕೃಷ್ಣ ಹೇಳಿದ್ದು. ನೀನು ನನ್ನನ್ನು ಧ್ಯಾನಿಸಿದರೆ ನನ್ನ ಜ್ಞಾನವೆಲ್ಲಾ ನಿನ್ನದಾಗುತ್ತದೆ ಎಂದು ಶ್ರೀಕೃಷ್ಣ ಹೇಳಿದ್ದಾರೆ ಎಂದು ಹೇಳಿದರು.
ಕುಶಲ ಹಾಸ್ಯ ಪ್ರಿಯರ ಸಂಘದ ಅಧ್ಯಕ್ಷೆ ಪದ್ಮರಾಮಕೃಷ್ಣ ಮಾತನಾಡಿ, ಕೃಷ್ಣನನ್ನು ನೆನೆದಾಗ ಕೃಷ್ಣನ ಬಾಲ್ಯ ಚೇಷ್ಟೆಗಳು ನೆನಪಾಗುತ್ತದೆ. ಮೊದಲೆಲ್ಲ ಮಕ್ಕಳಿಗೆ ಶ್ರೀಕೃಷ್ಣನ ಲೀಲೆಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದರು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆ. ಜಯರಾಮ ಕುಲಾಲ್, ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಪೂಜಾರಿ ಮುಕ್ವೆ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ರೈ ಸಂಪ್ಯ ವೇದಿಕೆಯಲ್ಲಿ ಉಪ್ಥಿತರಿದ್ದರು.
ಬಿ ಪುರಂದರ ಭಟ್ ಸ್ವಾಗತಿಸಿ, ಕೆ ಜಯರಾಮ ಕುಲಾಲ್ ವಂದಿಸಿದರು. ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆಸಲಾಯಿತು. ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ಮಾನವನಗಿ ಹುಟ್ಟಿ ಬೆಳೆದ ಕೃಷ್ಣ ಬೆಳೆಯುತ್ತಾ ಹೋದ ಹಾಗೆ ಒಳ್ಳೆಯವರ ಜೊತೆ ಸೇರಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ದೈವತ್ವವನ್ನು ಪಡೆದ, ಆದ್ದರಿಂದ ನಾವೆಲ್ಲಾ ಉತ್ತಮ ಕೆಲಸ ಮಾಡುತ್ತಾ ಶ್ರೀಕೃಷ್ಣನ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು. ನಂತರ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೆ. ಜಯರಾಮ ಕುಲಾಲ್ ಸ್ವಾಗತಿಸಿ ಎಮ್ ಶೇಷಪ್ಪ ಕುಲಾಲ್ ವಂದಿಸಿದರು.
ದೀಪ್ತಿ ಬಲ್ನಾಡ್, ವಿನುತಾ ನಾಯ್ಕ ಮೊಟ್ಟೆತಡ್ಕ, ಜಾನಕಿ ಉಪ್ಪಿನಂಗಡಿ ಸಹಕರಿಸಿದರು, ತೇಜಕುಮಾರ್ ಕುಲಾಲ್ ಎನ್ ಕಾರ್ಯಕ್ರಮ ನಿರೂಪಿಸಿದರು.