ರೂ.41.50 ಕೋಟಿ ವ್ಯವಹಾರ, ರೂ.29.56 ಲಕ್ಷ ಲಾಭ, ಶೇ.10 ಡಿವಿಡೆಂಡ್
ಪುತ್ತೂರು: ಪಡೀಲು ಬಾಳಪ್ಪ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಪುತ್ತೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ.41.50 ಕೋಟಿ ವ್ಯವಹಾರ ಮಾಡಿ ರೂ.29.56 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಮಹಾಸಭೆಯು ಆ.19ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವರದಿ ವರ್ಷದಲ್ಲಿ ಸಂಘವು 338 ಸದಸ್ಯರಿಂದ ರೂ. 5,97,292 ಪಾಲು ಬಂಡವಾಳ ಹೊಂದಿರುತ್ತದೆ. ರೂ.6,73,22,300.46 ವಿವಿಧ ರೂಪದ ಠೇವಣಿ, ರೂ.1,65,39,483.16 ಕ್ಷೇಮ ನಿಧಿ, ರೂ.25,000 ಇತರ ಸಹಕಾರಿ ಸಂಘದಲ್ಲಿ ಪಾಲು ಬಂಡವಾಳ ಹೊಂದಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಸಂಘದಿಂದ ಠೇವಣಿ ಹೂಡಿಕೆ ಮಾಡಲಾಗಿದೆ. ರೂ.7,72,23,106 ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಸಂಘವು ಒಟ್ಟು ರೂ.29,56,984.44 ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

ಬ್ರಹ್ಮಶ್ರೀ ನಾರಾಯಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಪೈಪೋಟಿಯ ಯುಗದಲ್ಲಿಯೂ ಪುತ್ತೂರಿನಲ್ಲಿ ಐದು ಮೂರ್ತರದಾರರ ಸೇವಾ ಸಹಕಾರಿ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಉತ್ತಮ ಸೇವೆಯಿಂದ ಬೆಳವಣಿಗೆ ಸಾಧ್ಯವಾಗಿದೆ ಎಂದರು.
ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಮೂರ್ತೆದಾರರ ಸಹಕಾರಿ ಸಂಘದಲ್ಲಿ ಅವ್ಯವಹಾರ, ಮೋಸ ಇಲ್ಲದೆ ವ್ಯವಹರಿಸುತ್ತಿರುವುದರಿಂದ ಅತೀ ಹೆಚ್ಚು ಠೇವಣಿ ಬರುತ್ತಿದೆ. 21ಶತಮಾನದಲ್ಲಿದ್ದು ಉತ್ತಮ ಸ್ಥಳಗಳನ್ನು ಅಯ್ಕೆಮಾಡಿ ಸಂಘದ ಶಾಖೆ ತೆರೆದು ವ್ಯವಹಾರ ವಿಸ್ತರಿಸುವ ಜೊತೆಗೆ ಉದ್ಯೋಗ ನೀಡಬೇಕು ಎಂದು ತಿಳಿಸಿದರು.
ಮೂರ್ತೆದಾರರ ಮಹಾಮಂಡಲದ ನಿರ್ದೇಶಕ ಆರ್.ಸಿ ನಾರಾಯಣ ಮಾತನಾಡಿ, ಹಲವಾರು ಸಹಕಾರಿ ಸಂಸ್ಥೆಗಳಿದ್ದರೂ ಇತರ ಸಮಾಜದವರು ನಮ್ಮ ಸಂಘದಲ್ಲಿ ಮೇಲಿನ ವಿಶ್ವಾಸ, ನಂಬಿಕೆಯಿಂದ ಎಲ್ಲಾ ಸಮಾಜದವರು ನಮ್ಮ ಸಂಘದಲ್ಲಿಯೇ ಅತೀ ಹೆಚ್ಚು ಠೇವಣಿ ಇಡುತ್ತಿದ್ದಾರೆ. ಸಂಘವು ಇನ್ನಷ್ಟು ಬೆಳೆಯಲು ಎಲ್ಲರ ಸಹಕಾರ ಅಗತ್ಯ ಎಂದರು.
ಹಾರಾಡಿ ಶಾಲೆಗೆ ದೇಣಿಗೆ:
ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಟರ್ ಲಾಕ್ ಅಳವಡಿಕೆಗೆ ಮಹಾಸಭೆಯಲ್ಲಿ ಸಂಘದಿಂದ ರೂ.25,000 ದೇಣಿಗೆಯನ್ನು ಶಾಲಾ ಮುಖ್ಯ ಗುರು ಕೆ.ಕೆ ಮಾಸ್ಟರ್ ಹಾಗೂ ಎಸ್.ಡಿಎಂಸಿ ಅಧ್ಯಕ್ಷೆ ಸುಲೋಚನ ಅವರಿಗೆ ಹಸ್ತಾಂತರಿಸಲಾಯಿತು.
ಸನ್ಮಾನ, ಗೌರವಾರ್ಪಣೆ:
ಸಂಘದ ಸ್ಥಾಪಕ ಅಧ್ಯಕ್ಷ ಬಟ್ಯಪ್ಪ ಪೂಜಾರಿ ಬಲ್ನಾಡು, ಸ್ಥಾಪಕ ನಿರ್ದೇಶಕರಾಗಿರುವುದಲ್ಲದೇ ಪ್ರಸ್ತುತ ನಿರ್ದೇಶಕರರಾಗಿರುವ ಪದ್ಮಪ್ಪ ಪೂಜಾರಿ ಮತಾವು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಸಂಘದಲ್ಲಿ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಿದ ಮಾಜಿ ಅಧ್ಯಕ್ಷ ಬಾಳಪ್ಪ ಪೂಜಾರಿಯವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು. ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶೃತಿಯವರನ್ನು ಗೌರವಿಸಲಾಯಿತು. ಪಿಗ್ಮಿ ಸಂಗ್ರಾಹಕರಾದ ಸತೀಶ್ ಆರ್., ಭಾಸ್ಕರ್ ಕೆ., ದಿನೇಶ್ ಕೆ., ಶಿವಪ್ರಸಾದ್ ಹಾಗೂ ಗಣೇಶ್ ಬಿ. ಹಾಗೂ ಭರತ್ ಆರ್ಥಿಕ ಧನ ಸಹಾಯ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಬಿ.ಕೆ.ಆನಂದ ಸುವರ್ಣ ಬಪ್ಪಳಿಗೆ, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಪದ್ಮಪ್ಪ ಪೂಜಾರಿ ಮತಾವು, ಜಯಲಕ್ಷ್ಮಿ ಸುರೇಶ್ ಕೇಪುಳು, ಗೋಪಾಲಕೃಷ್ಣ ಸುವರ್ಣ ಗೆಣಸಿನಕುಮೇರು, ಜಿನ್ನಪ್ಪ ಪೂಜಾರಿ ಮುರ, ಚಂದಪ್ಪ ಪೂಜಾರಿ ಕಾಡ್ಲ, ಉಮೇಶ್ ಪೂಜಾರಿ ರಾಗಿದಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಗ್ಮಿ ಸಂಗ್ರಾಹಕ ದಿನೇಶ್ ಕೆ. ಪ್ರಾರ್ಥಿಸಿದರು. ವಿಶೇಷಾಧಿಕಾರಿ ರಾಧಾಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಶಯನಾ ಜಯಾನಂದ ಕೋಡಿಂಬಾಡಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಎಂ ವಾರ್ಷಿಕ ವರದಿ ಮಂಡಿಸಿದರು. ಲೆಕ್ಕಿಗ ಆಯ-ವ್ಯಯ ಮಂಡಿಸಿದರು. ಪಿಗ್ಮಿ ಸಂಗ್ರಾಹಕರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು.
ನಮ್ಮ ಸಹಕಾರಿ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನತೆ ವಿಶ್ವಾಸದಿಂದ ವ್ಯವಹರಿಸುತ್ತಿದ್ದಾರೆ. ಪೈಪೋಟಿಯಿದ್ದರೂ ಸಂಘವು ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿದೆ. ಸಂಘದಲ್ಲಿ ನಗು ಮೊಗದಿಂದ ಸೇವೆ ನೀಡಲಾಗುತ್ತಿದೆ. ಸ್ವಂತ ಕಟ್ಟಡಕ್ಕೆ ನಿರ್ಮಾಣಕ್ಕೆ ಜಾಗದ ಕೊರತೆಯಿದೆ. ಶಾಖೆ ತೆರೆಯಲು ಬೇಡಿಕೆಯಿದ್ದರೂ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣವಾದ ಬಳಿಕ ಶಾಖೆ ತೆರೆಯಲಾಗುವುದು.
-ಸುಂದರ ಪೂಜಾರಿ ಬಡಾವು, ಅಧ್ಯಕ್ಷರು
ಪಡೀಲು ಮೂರ್ತೆದಾರರ ಸೇವಾ ಸಹಕಾರಿ ಸಂಘ