ನೆಲ್ಯಾಡಿ: ಕರ್ನಾಟಕ ರಸ್ತೆ ಸಾರಿಗೆ ನಿಗಮ ಪುತ್ತೂರು ಘಟಕದ ವತಿಯಿಂದ ಸುಬ್ರಹ್ಮಣ್ಯ-ಕಡಬ-ಬಲ್ಯ-ರಾಮನಗರ-ನೆಲ್ಯಾಡಿ-ಉಪ್ಪಿನಂಗಡಿ ಮಾರ್ಗವಾಗಿ ಪುತ್ತೂರುಗೆ ಆರಂಭಗೊಂಡಿರುವ ನೂತನ ಬಸ್ಗೆ ಬಲ್ಯ ರಾಮನಗರದಲ್ಲಿ ಗ್ರಾಮಸ್ಥರಿಂದ ಸ್ವಾಗತ ಕೋರಲಾಯಿತು.

ರಾಮನಗರದಲ್ಲಿ ಬಸ್ಸಿಗೆ ಹೂವಿನ ಹಾರಾರ್ಪಣೆ ಮಾಡಿ ಗ್ರಾಮಸ್ಥರು ಸ್ವಾಗತ ಕೋರಿದರು. ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಶಾಲು ಹಾಕಿ, ಗುಲಾಬಿ ಹೂವು ನೀಡಿ ಗೌರವಿಸಲಾಯಿತು. ಈ ವೇಳೆ ಸ್ವಾಗತಿಸಿ ಮಾತನಾಡಿದ ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷರೂ ಆದ ಗಂಗಾಧರ ಶೆಟ್ಟಿ ಹೊಸಮನೆ ಅವರು, ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪುತ್ತೂರು ಘಟಕದ ಸಹಾಯಕ ವಿಭಾಗಾಧಿಕಾರಿ ಜೈಶಂಕರ್ರವರ ವಿಶೇಷ ಮುತುವರ್ಜಿಯಿಂದ ಮತ್ತು ಕಡಬ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರ ಸಹಕಾರದಿಂದ ನೆಲ್ಯಾಡಿ ಗ್ರಾಮದ ರಾಮನಗರ ಗ್ರಾಮಸ್ಥರ ಅವಿರತ ಶ್ರಮ ಮತ್ತು ಕಡಬ ತಾಲೂಕು ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಹಕಾರದಿಂದ ಈ ಬಸ್ ಸಂಚಾರ ಆರಂಭಗೊಂಡಿದೆ ಎಂದರು. ಧಾರ್ಮಿಕ ಮುಂದಾಳು ಬೀರುಕ್ಕು ಶ್ರೀ ರಾಜನ್ ದೈವ ಸೇವಾ ಟ್ರಸ್ಟ್ನ ಅಧ್ಯಕ್ಷ ಧನಂಜಯ ಕೊಡಂಗೆ, ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ರೈ, ರಾಮನಗರ ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕಿರಣ್ ಪುತ್ತಿಲ, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಗುತ್ತು, ರಾಮನಗರದ ಹಿರಿಯ ಯಕ್ಷಗಾನ ಕಲಾವಿದ ವಿಠಲ ಮಾರ್ಲ, ಶಿವರಾಮ ರೈ ಗುತ್ತು, ದಿನಕರ ಗೌಡ ನಾಲ್ಗುತ್ತು, ಜಗದೀಶ್ ಮಾರ್ಲ, ನಿತಿನ್ ಮಾರ್ಲ, ಸುರೇಖಾ ಡಿ ಮಾರ್ಲ, ಶಾಲಾ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿರಿದ್ದರು. ಧನಂಜಯ ಗೌಡ ಕೊಡಂಗೆ ವಂದಿಸಿದರು.
ಸುಬ್ರಹ್ಮಣ್ಯದಿಂದ 7.15ಕ್ಕೆ ಹೊರಟು 9.30ಕ್ಕೆ ಪುತ್ತೂರು
ಈ ಬಸ್ಸು ಸುಬ್ರಮಣ್ಯದಿಂದ ಬೆಳಿಗ್ಗೆ 7.15ಕ್ಕೆ ಹೊರಟು 8.30ಕ್ಕೆ ನೆಲ್ಯಾಡಿ, 9 ಗಂಟೆಗೆ ಉಪ್ಪಿನಂಗಡಿ, 9.30ಕ್ಕೆ ಪುತ್ತೂರಿಗೆ ತಲುಪಲಿದೆ. ನೆಲ್ಯಾಡಿ, ಉಪ್ಪಿನಂಗಡಿ, ಪುತ್ತೂರಿಗೆ ಹೋಗುವ ಶಾಲಾ-ಕಾಲೇಜು ಮಕ್ಕಳಿಗೆ, ನೌಕರರಿಗೆ, ಸಾರ್ವಜನಿಕರಿಗೆ ಈ ಬಸ್ಸು ಅನುಕೂಲ ಕಲ್ಪಿಸಲಿದೆ.