ಕ್ಯಾನ್ಸರ್ ಖಾಯಿಲೆಗೆ ತುತ್ತಾದವರಿಗೆ ಕೇಶದಾನ: ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಪುಟ್ಟ ಬಾಲಕಿ

0

ಪುತ್ತೂರು: ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸಜಂಕಾಡಿ ಇಲ್ಲಿಯ ಐದನೆಯ ತರಗತಿಯ ವಿದ್ಯಾರ್ಥಿನಿ ಕುಮಾರಿ ನಿಶಿಕಾ ಉರಿಕ್ಯಾಡಿ ಮಾರಕ ಖಾಯಿಲೆ ಕ್ಯಾನ್ಸರ್ ಗೆ ತುತ್ತಾದವರಿಗೆ ತನ್ನ ಕೇಶರಾಶಿಯನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದಾಳೆ.


ಆ.23 ರಂದು(ಇಂದು) ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಈ ವಿದ್ಯಾರ್ಥಿನಿಯು ಹುಟ್ಟುಹಬ್ಬದ ಸಾರ್ಥಕ್ಯವಾಗಿ ರೋಟರಿ ಕ್ಲಬ್ ಪುತ್ತೂರು ಇದರ ಸಹಕಾರದೊಂದಿಗೆ ತನ್ನ ಕೇಶವನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿ ಎನಿಸಿಕೊಂಡಿದ್ದಾಳೆ.


ತಾಲೂಕಿನ ಪಡುವನ್ನೂರು ಗ್ರಾಮದ ಕರ್ಪುಡಿಕಾನದ ಕೃಷ್ಣ ಯು ಮತ್ತು ಯಶೋಧ ಕೆ ದಂಪತಿಗಳ ಪುತ್ರಿಯಾಗಿರುವ ಈಕೆಗೆ ಎಳವೆಯಲ್ಲಿಯೇ ಪರೋಪಕಾರ,ಸೇವಾ ಮನೋಭಾವನೆಯನ್ನು ತುಂಬುವ ಸಲುವಾಗಿಯೇ ಇಂತಹ ಕಾರ್ಯಕ್ಕೆ ಬೆಂಬಲ ನೀಡಿ , ಪ್ರೋತ್ಸಾಹಿಸಲಾಗಿದೆ ಎಂದು ಬಾಲಕಿಯ ಹೆತ್ತವರ ಮನದಾಳದ ಮಾತಾಗಿದ್ದು , ಬಾಲಕಿಯ ಪುಟ್ಟ ಸೇವೆಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here