ಪುತ್ತೂರು: ಮೈಸೂರಿನ ಕರ್ನಾಟಕ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 96% ಅಂಕಗಳನ್ನು ಗಳಿಸುವ ಮೂಲಕ ಮತ್ತು ವಿಶಿಷ್ಟ ಸ್ಥಾನ ಪಡೆಯುವ ಮೂಲಕ ಸನಿಹಾ ಕೆಮ್ಮಿಂಜೆ ಅವರು ಸಾಧನೆ ಮಾಡಿದ್ದಾರೆ.
ಈಕೆ ಮಂಗಳೂರಿನ ಕಲಾಭಾರತಿ ನೃತ್ಯ ಶಾಲೆಯ ಗುರು ಪ್ರಣತಿ ಸತೀಶ್ ಭಟ್ ಶಿಷ್ಯೆ. ಸನಿಹಾ ಕೆಮ್ಮಿಂಜೆ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ ಮತ್ತು ವಿನೋದ್ ಕುಮಾರ್ ಕೆ ಮತ್ತು ಡಾ. ಸಿಂಧು ಬೇಕಲ್ ಅವರ ಪುತ್ರಿ.