ವಿಟ್ಲ : ಕರ್ನಾಟಕ ರಾಜ್ಯ ಡಾl ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಇಡ್ಕಿದು ಗ್ರಾಮದ ಮಿತ್ತೂರಿನ ಪ್ರಾರ್ಥನಾ.ಎಸ್. ಶೆಟ್ಟಿರವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.
ಪುತ್ತೂರಿನ ಶ್ರೀ ಶಾರದ ಕಲಾಕೇಂದ್ರದ ಗುರುಗಳಾದ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ರವರ ಶಿಷ್ಯೆ ಯಾಗಿರುವ ಇವರು ಮಿತ್ತೂರು ಹಿ.ಪ್ರಾ. ಶಾಲಾ 6 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಇಡ್ಕಿದು ಗ್ರಾ.ಪಂ. ಮಾಜಿ ಅಧ್ಯಕ್ಷರು, ಪ್ರಸ್ತುತ ಸದಸ್ಯರಾಗಿರುವ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು ಹಾಗೂ ಅರ್ಚನಾ ಶೆಟ್ಟಿ ದಂಪತಿ ಪುತ್ರಿಯಾಗಿದ್ದಾರೆ.