ಪುತ್ತೂರು: ಸಂಪ್ಯ ಶ್ರೀಕೃಷ್ಣ ಯುವಕ ಮಂಡಲದ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಒಳತ್ತಡ್ಕ ರಸ್ತೆಯ ಸ್ಚಚ್ಚತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಶ್ರೀಕೃಷ್ಣ ಯುವಕ ಮಂಡಲದ ಸ್ಥಾಪಕಾದ್ಯಕ್ಷರಾದ ರವಿಚಂದ್ರ ಆಚಾರ್ಯರವರ ಮಾರ್ಗದರ್ಶನದಲ್ಲಿ ಅಧ್ಯಕ್ಷರಾದ ಸಂತೋಷ್ ಸುವರ್ಣ ಮೇರ್ಲ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ವರ್ಷಂಪ್ರತಿ ನಡೆಸುವಂತೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಅಮ್ಮನವರ ದೇವಸ್ಥಾನ, ಆರ್ಯಾಪು, ನೇರಳೆಕಟ್ಟೆ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಷಕ್ಷರಾದ ಸತೀಶ್ ರೈ ಮಿಶನ್ ಮೂಲೆರವರು ಬೆಳಿಗ್ಗೆ ಶ್ರೀ ಅಮ್ಮನವರ ದೇವಸ್ಥಾನ, ಆರ್ಯಾಪು ನೇರಳಕಟ್ಟೆ ಹಾಗೂ ಶ್ರೀ ಕೊರಗಜ್ಜ ಕ್ಷೇತ್ರ ದಂಬೆತ್ತಿಮಾರ್ ಕ್ಷೇತ್ರಗಳಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀಚಕ್ರ ರಾಜರಾಜೇಶ್ವರೀ ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣ ದೇವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆಯನ್ನು ನೀಡಿದರು.

ಬಳಿಕ ಅಂಗನವಾಡಿಯಿಂದ ಸಂಪ್ಯದವರೆಗೆ ಪುಟಾಣಿ ಮಕ್ಕಳೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು. ಸಂಪ್ಯ ಒಳತ್ತಡ್ಕ ಎಂಬಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ನಾಗೇಶ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನೀರಿಕ್ಷಕರಾದ ಜಂಬೂರಾಜ್, ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಸತೀಶ್ ರೈ ಮಿಶನ್ ಮೂಲೆ ಹಾಗೂ ಕುಕ್ಕಾಡಿ ತಂತ್ರಿವರ್ಯರಾದ ಪ್ರೀತಂ ಪುತ್ತೂರಾಯ ಇವರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಾಂತರ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದವರು ಯುವಕ ಮಂಡಲ, ಯುವತಿ ಮಂಡಲದ ಹಲವಾರು ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಂಪ್ಯ ಒಳತ್ತಡ್ಕ ರಸ್ತೆಯನ್ನು ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಚಕ್ರ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ನಂತರ ಅಂಗನವಾಡಿ ಪುಟಾಣಿಗಳಿಂದ ಹಾಗೂ ಸಾರ್ವಜನಿಕರಿಂದ ನೃತ್ಯ ಕಾರ್ಯಕ್ರಮವನ್ನು ನಡೆಸಲಾಯಿತು.
ಧಾರ್ಮಿಕ ಕಾರ್ಯಕ್ರಮ:
ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರೀತಂ ಪುತ್ತೂರಾಯ ತಂತಿವರ್ಯರು ಕುಕ್ಕಾಡಿ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಧಾರ್ಮಿಕ ಸಭೆಯಲ್ಲಿ ಪೆರ್ನೆ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಶೇಖರ್ ರೈ.ಕೆ,ರವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷತೆಯ ಕುರಿತು ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಸಂಪ್ಯ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಇವರು ಧಾರ್ಮಿಕತೆಯ ಕುರಿತು ಹಾಗೂ ಶ್ರೀ ಕೃಷ್ಣ ಯುವಕ ಮಂಡಲದ ವತಿಯಿಂದ ನಡೆಸುತ್ತಿರುವ ಜನ್ಮನಾಷ್ಟಮಿಯು ಕುರಿತು ಶುಭ ಹಾರೈಸಿದರು.. ವೇದಿಕೆಯಲ್ಲಿ ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಹೆಚ್, ಗಂಗಾಧರ ಅಮೀನ್ ಹೊಸಮನೆ, ಶ್ರೀಕೃಷ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರವಿಚಂದ್ರ ಆಚಾರ್ಯ, ಅಧ್ಯಕ್ಷ ಸಂತೋಷ್ ಸುವರ್ಣ ಮೇರ್ಲ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ದೆಗಳಲ್ಲಿ ಬಹುಮಾನ ಗಳಿಸಿದ ಪುಟಾಣಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ, ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ದೇವಯ್ಯ ಗೌಡ, ಭವ್ಯ ರಾಘವೇಂದ್ರ ಶೆಟ್ಟಿ, ಧನುಷ್ ಹೊಸಮನೆ, ಶಾಲಾ ಅಂಗನವಾಡಿ ಶಿಕ್ಷಕಿ ಶ್ಯಾಮಲಾ, ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿಯವರು, ಸ್ಥಳೀಯರಾದ ಶ್ರೀಮತಿ ವಿನಯ ಚಂದ್ರನಾಥ, ರವೀಂದ್ರ ಶೆಟ್ಟಿ ಕಂಬಳದಡ್ಡ, ರಾಘವೇಂದ್ರ ಶೆಟ್ಟಿ ಮೇರ್ಲ, ಕಾರ್ಯದರ್ಶಿ ಶೇಷಪ್ಪ ನಾಯೈಕ್, ಲೋಕೇಶ್ ರೈ ಮೇರ್ಲ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಪೂರ್ವಾಧ್ಯಕ್ಷರಾದ ಸುರೇಶ್ ಪಿ ಹಾಗೂ ಜಯಂತ ಶೆಟ್ಟಿ ಕಂಬಳತ್ತಡ್ಡ, ಸುಶಾಂತ್ ಶೆಟ್ಟಿ, ಪವನ್ ಶೆಟ್ಟಿ ಮೇರ್ಲ, ನೇಮಾಕ್ಷ ಸುವರ್ಣ ಅಮ್ಮುಂಜ, ಧನುಷ್ ಹೊಸಮನೆ, ಚಂದ್ರನಾಥ ಬಂಗೇರ ಮೇರ್ಲ, ತಾರನಾಥ ಸುವರ್ಣ ಮೇರ್ಲ, ಮನೋಜ್ ರೈ ಮೇರ್ಲ, ಉಜ್ವಲ್ ರೈ ಮೇರ್ಲ, ವಿಜೇತ್ ಸುವರ್ಣ ಮೇರ್ಲ, ದೀಪಕ್ ಸುವರ್ಣ ಮೇರ್ಲ, ನವೀನ್ ರೈ ಮಜಲು, ಶಿವಪ್ರಸಾದ್ ಮಜಲು, ವಿಕಾಸ್ ಬಿ.ಎಂ. ಹಾಗೂ ಹಲವಾರು ಮಂದಿ ಹಾಜರಿದ್ದರು.