ಅಮೆರಿಕದ ಟೆಕ್ಸೆಸ್, ಆಸ್ಟಿನ್ ನಗರದಲ್ಲಿ “ಡೇ ಆಫ್ ಗ್ರಾಟಿಟ್ಯೂಡ್ 2025″ ಸಮಾರಂಭ – ನಟ ರಮೇಶ್‌ ಅರವಿಂದ್‌ ಅವರಿಗೆ “ರಮೇಶ್ ಅರವಿಂದ್ ಡೇ” ಗೌರವ

0

ಪುತ್ತೂರು: ಅಮೆರಿಕದ ಟೆಕ್ಸೆಸ್, ಆಸ್ಟಿನ್ ನಗರದಲ್ಲಿ ನಡೆದ “ಡೇ ಆಫ್ ಗ್ರಾಟಿಟ್ಯೂಡ್ 2025” ಸಮಾರಂಭ ಆ.23ರಂದು ನಡೆಯಿತು.ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಚಿತ್ರನಟ ರಮೇಶ್‌ ಅರವಿಂದ್‌ ಅವರನ್ನು ಗೌರವಿಸಿದರು. ರಮೇಶ್ ಅರವಿಂದ್ ಇವರ ಜೀವನ ಅನುಭವದ -ನಟನೆ, ನಿರ್ದೇಶನ ಮತ್ತು ಸಿನಿಮಾ ಹಾಗೂ ತನ್ನ ಸ್ಪೂರ್ತಿದಾಯಕ ಮಾತುಗಳಿಂದ ಜನ-ಮಾನಸದಲ್ಲಿ ಬೆಳೆದು ನಿಂತ ಕಾರಣಕ್ಕಾಗಿ “ರಮೇಶ್ ಅರವಿಂದ್ ಡೇ” ಆಚರಿಸಿ ಗೌರವಿಸಲಾಯಿತು. ಸಾವಿರಾರು ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು.

ಆಸ್ಟಿನ್ ನಗರದ “ಪ್ರೋಕ್ಲಮೇಷನ್ ಡೇ” ದಿನದಂದು ಅಲ್ಲಿನ ಮೇಯರ್, ಪ್ರೊಟೆಮ್ ವನೀಸಾ ಇವರು ಟೆಕ್ಸನ್ ಗವರ್ನರ್ ಗ್ರೆಗ್ ಅಬೌಟ್ ಅವರ ಸಂದೇಶದ ಸನ್ಮಾನ ಪತ್ರವನ್ನು ನೀಡಿ ಗೌರವಿಸಿದರು.ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಅರವಿಂದ್, “ಈ ಕಾರ್ಯಕ್ರಮ ನನ್ನ ಜೀವನದ ಅಭೂತಪೂರ್ವ ಕ್ಷಣ. ಇದನ್ನು ನಾನು ಮರೆಯಲಾರೆ” ಎಂದರು.

ಆಸ್ಟಿನ್ ನಗರದ ಚೀಫ್ ಲರ್ನಿಂಗ್ ಆಫೀಸರ್, ಮೀಚಲೇ ಲಾ ಟೋರನ್ ಉಪಸ್ಥಿತರಿದ್ದರು. ಗ್ರಾಟಿಟ್ಯೂಟ್ ಡೇ ಸಂಸ್ಥಾಪಕ ಎಂ. ಜೆ. ಚಾರ್ಮನಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here