ಕಡಬ: ಮಹಿಳೆಗೆ ಜೀವ ಬೆದರಿಕೆ, ಹಲ್ಲೆ ಆರೋಪ : ಮೂವರ ವಿರುದ್ದ ಪ್ರಕರಣ ದಾಖಲು

0

ಕಡಬ: ಮಗನ ಅಂಗಡಿಯ ಮುಂದೆ ನಿಂತಿದ್ದ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿರುವ ಆರೋಪದ ಹಿನ್ನಲೆ ಮೂರು ಮಂದಿಯ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕುಟ್ರುಪಾಡಿ ಗ್ರಾಮದ ಕಲ್ಲೋಲಿಕ್ಕಲ್ ನಿವಾಸಿ ಸಾರಮ್ಮ ಎಂಬವರಿಗೆ ಹಲ್ಲೆ ನಡೆಸಿದ ಕುಟ್ರುಪಾಡಿ ಗ್ರಾಮದ ಕೋಡಿಬೈಲು ನಿವಾಸಿಗಳಾದ ಜಗನ್ನಾಥ ರೈ, ಇವರ ಪತ್ನಿ ಪುಷ್ಪಾ, ಮಗಳು ಪ್ರಜಾಲಕ್ಷ್ಮೀ ವಿರುದ್ದ ಕಡಬ ಠಾಣೆಯಲ್ಲಿ ಬಿ.ಎನ್.ಎಸ್. ಕಲಂ, 352,115,351,5 ರಂತೆ ಪ್ರಕರಣ ದಾಖಲಾಗಿದೆ.


ಪ್ರಕರಣದ ವಿವರ:
ಜುಲೈ 19ರ ರಾತ್ರಿ ಸುಮಾರು 7.30ರ ವೇಳೆಗೆ ಮುಳಿಮಜಲು ಎಂಬಲ್ಲಿ ಸಾರಮ್ಮ ಅವರ ಮಗ ಮ್ಯಾಥ್ಯೂ ಕೆ.ಎಂ. ಅಂಗಡಿಯಲ್ಲಿ ಮ್ಯಾಥ್ಯೂ ಕೆ.ಎಂ. ಹಾಗೂ ಮಗ ರಕ್ಷಿತ್ ಮ್ಯಾಥ್ಯೂ ಅವರು ತಮ್ಮ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೇ ವೇಳೆ ಅಂಗಡಿಯ ಎದುರು ನಿಂತಿದ್ದ ಸಾರಮ್ಮ ಅವರಿಗೆ ಆಟೋ ರಿಕ್ಷಾದಲ್ಲಿ ಬಂದ ಜಗನ್ನಾಥ ರೈ ಹಾಗೂ ಅವರ ಪತ್ನಿ ಹಾಗೂ ಮಗಳು ಪ್ರಜಾಲಕ್ಷ್ಮೀ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದು ಅಲ್ಲದೆ ಸಾರಮ್ಮ ಅವರನ್ನು ದೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಸಾರಮ್ಮ ಅವರನ್ನು ಕಡಬ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಸಾರಮ್ಮ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯ ಪ್ರಕರಣ ದಾಖಲಿಸಲು ಅನುಮತಿ ನೀಡಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.


ಪದೆ ಪದೆ ಕಿರುಕುಳ-ಆರೋಪ
ಈ ಬಗ್ಗೆ ಹೇಳಿಕೆ ನೀಡಿರುವ ಸಾರಮ್ಮ ಅವರು, ನನ್ನ ಮಗನ ಅಂಗಡಿಯ ಸಮೀಪ ಅಂಗಡಿ ಹೊಂದಿರುವ ಜಗನ್ನಾಥ ರೈ ಅವರ ಪತ್ನಿ ಪುಷ್ಪ ಯಾನೆ ಪ್ರಮೋದ ಹಾಗೂ ಅವರ ಗಂಡ ಪದೆ ಪದೆ ನಮಗೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದು, ಅಲ್ಲದೆ ನನ್ನ ಮಗನ ಮೇಲೆ ಹಲವಾರು ಬಾರಿ ದೂರು ನೀಡಿದ್ದಾರೆ. ನಮಗೆ ಕಿರುಕುಳ ನೀಡಿರುವ ಬಗ್ಗೆ ನಾವು ಕೂಡ ಈ ಹಿಂದೆಯೂ ಅವರ ಮೇಲೆ ದೂರು ನೀಡಿದ್ದೇವು ಇನ್ನೂ ಮುಂದೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here