ಪುತ್ತೂರು: ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
10ನೇ ತರಗತಿಯ ಸಮೃದ್ಧ್ ಎಲ್. ಶೆಟ್ಟಿ 100 ಮೀಟರ್ ಫ್ರೀ ಸ್ಟೈಲ್, 2೦೦ ಮೀಟರ್ ಫ್ರೀ ಸ್ಟೈಲ್, 2೦೦ ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ ಮತ್ತು 4×1೦೦ ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿಗಳಾದ ಅನಿತೇಜ್ ಮಧುಸೂದನ ಸಾಲೆ 8೦೦ ಮೀಟರ್ ಫ್ರೀ ಸ್ಟೈಲ್ನಲ್ಲಿ ಬೆಳ್ಳಿ ಹಾಗೂ 5೦ ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಕಂಚಿನ ಪದಕ ಪಡೆದರೆ, 7ನೇ ತರಗತಿಯ ಪ್ರತ್ಯುಷ್ ಎಲ್.ಎಸ್. ಗೌಡ 5೦ ಮೀ. ಬ್ಯಾಕ್ಸ್ಟ್ರೋಕ್ ಹಾಗೂ 5೦ ಮೀ. ಬಟರ್ಫ್ಲೈಯಲ್ಲಿ ಚಿನ್ನ, 5೦ ಮೀಟರ್ ಫ್ರೀ ಸ್ಟೈಲ್ನಲ್ಲಿ ಕಂಚು ಹಾಗೂ 4×1೦೦ ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪಡೆದಿದ್ದಾರೆ. ಇದೇ ತರಗತಿಯ ದೀಪಾಂಶ್ ಶೆಟ್ಟಿ 1೦೦ ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಬೆಳ್ಳಿ, 1೦೦ ಮೀಟರ್ ಫ್ರೀ ಸ್ಟೈಲ್ನಲ್ಲಿ ಕಂಚು ಹಾಗೂ 4×1೦೦ ಮೀಟರ್ ಮಿಡಲ್ ರಿಲೇಯಲ್ಲಿ ಬೆಳ್ಳಿ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜತೆಗೆ, ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಒಂಬತ್ತನೇ ತರಗತಿಯ ಲಲನ್ ಯು. ನಾಯಕ್ 4೦೦ ಮೀಟರ್ ಫ್ರೀ ಸ್ಟೈಲ್ನಲ್ಲಿ ಕಂಚಿನಪದಕ ಮತ್ತು 4×1೦೦ ಮೀ. ಮಿಡಲ್ ರಿಲೇಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ಇದೇ ತರಗತಿಯ ಮೆಹಕ್ ರವಿ ಕುಮಾರ ಕೋಠಾರಿ 1೦೦ ಮೀಟರ್ ಬ್ಯಾಕ್ಸ್ಟ್ರೋಕ್, 1೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ 1೦೦ ಮೀಟರ್ ಬಟರ್ ಫ್ಲೈಯಲ್ಲಿ ಕಂಚಿನ ಪದಕವನ್ನೂ, 4×1೦೦ ಮೆಡ್ಲೆ ರಿಲೇ ಹಾಗೂ 4×1೦೦ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ರಾಜ್ಮಟ್ಟದಿಂದ ಆಯ್ಕೆಯಾ ಸಮೃದ್ಧ ಎಲ್. ಶೆಟ್ಟಿ, ಅನಿತೇಜ್ ಮಧುಸೂದನ್ ಸಾಲೆ, ಪ್ರತ್ಯುಷ್ ಎಲ್.ಎಸ್ ಗೌಡ ಮತ್ತು ದೀಪಾಂಶು ಶೆಟ್ಟಿ ಇವರು ನವೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.