
ನೆಲ್ಯಾಡಿ: ಕಳೆದ ಮೂರ್ನಾಲ್ಕು ದಿನಗಳಿಂದ ಗೋಳಿತ್ತೊಟ್ಟು ಗ್ರಾಮದ ಕಡಮದಪಳಿಕೆಯಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ ಮಾಡುತ್ತಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿವೆ.
ಕಡಮದಪಳಿಕೆ ನಿವಾಸಿ ಸಾಗರ್ ಗುರುಪ್ರಸಾದ್ ಬಿ.ಎಸ್.ಅವರ ತೋಟಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆ ಕಾಡಾನೆಗಳು ದಾಳಿ ನಡೆಸುತ್ತಿವೆ. ಇದರಿಂದಾಗಿ ಇವರ ತೋಟದಲ್ಲಿ ಸುಮಾರು 26 ತೆಂಗಿನಮರ, 19 ಅಡಿಕೆ ಗಿಡ, 45ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶಗೊಳಿಸಿವೆ. ಅಲ್ಲದೆ ತೋಟದಲ್ಲಿನ ಸ್ಪಿಂಕ್ಲರ್ ಪೈಪ್ಗಳನ್ನು ಹಾನಿಗೊಳಿಸಿದೆ.
ಇದರಿಂದಾಗಿ ಸಾಗರ್ ಗುರುಪ್ರಸಾದ್ ಅವರಿಗೆ ಸಾವಿರಾರು ರೂ.ನಷ್ಟ ಸಂಭವಿಸಿದೆ. ಸ್ಥಳಕ್ಕೆ ಪುತ್ತೂರು ವಲಯದ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.