ಪುತ್ತೂರು: ಇಲ್ಲಿನ ಬಪ್ಪಳಿಗೆ ಗ್ರಾಮದ ನೆಲ್ಲಿಗುಂಡಿ ದಿ. ನಾರಾಯಣ ಹಾಗೂ ಲಕ್ಷ್ಮಿ ದಂಪತಿಗಳ ಪುತ್ರ ಮೋಹನ್ ನೆಲ್ಲಿಗುಂಡಿ ಇವರು 1988ರಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಸೇರ್ಪಡೆಯಾಗಿ, ವಿವಿಧೆಡೆ ಸುಮಾರು 36 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ಆ.30ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಮಂಗಳೂರು ಸರ್ಕಲ್ ಆಫೀಸ್, ಸಿಟಿ ಬ್ರಾಂಚೆಸ್, ಕೊಡಗು ಜಿಲ್ಲೆಯ ಸಿದ್ದಾಪುರ, ನಾಪೊಕ್ಳು, ಇಲ್ಲಿ ಸೇವೆ ಸಲ್ಲಿಸಿದ ಬಳಿಕ ನೆಲ್ಯಾಡಿ, ಪುತ್ತೂರು ಸಿಟಿ ಬ್ರಾಂಚಸ್ ಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ನೆಹರು ನಗರದ ವಿವೇಕಾನಂದ ಕಾಲೇಜು ಬಳಿ ಇರುವ ಸಿಟಿ ಬ್ರಾಂಚ್ ನಲ್ಲಿ CSA (ಕಸ್ಟಮರ್ ಸರ್ವೀಸ್ ಅಸೊಸಿಯೆಟ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪತ್ನಿ ಇಂದಿರಾ ಜಿ. , ಮಕ್ಕಳಾದ ಸ್ವರೂಪ್, ಸ್ವಸ್ತಿಕ್ ಹಾಗೂ ಧನ್ವಿತ್ ಇವರೊಂದಿಗೆ ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪ್ಪೆ ಬಳಿಯ ಧನ್ವಿ ನಿಲಯದಲ್ಲಿ ತನ್ನ ಸುಖಿ ಜೀವನವನ್ನು ನಡೆಸುತ್ತಿದ್ದಾರೆ. ಇವರು ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ತಾಲೂಕು ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಘಟಕದ ಅಧ್ಯಕ್ಷರಾಗಿ , ಪ್ರಸ್ತುತ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಸಮುದಾಯದ ಬಡ ಜನರಿಗೆ ತನ್ನ ಕೈಯಲಾದ ಸಹಾಯ ಸಹಕಾರವನ್ನು ನೀಡುತ್ತಿದ್ದಾರೆ.
ಬಪ್ಪಳಿಗೆ ಗ್ರಾಮದ ರಾಗಿ ಕುಮೇರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕೋಶಧಿಕಾರಿಯಾಗಿ , ಶಾಲಾ ಮಕ್ಕಳಿಗೆ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಪುಸ್ತಕಗಳನ್ನು ಹಂಚಿರುತ್ತಾರೆ. ಬಪ್ಪಳಿಗೆ ಮಾರಿಯಮ್ಮ ದೈವದ ಗುಡಿಯ ಪ್ರಧಾನ ಕಾರ್ಯದರ್ಶಿಯಾಗಿ ಗುಡಿಯ ಜೀರ್ಣೋದ್ಧಾರ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ.
ಇಷ್ಷು ಮಾತ್ರವಲ್ಲದೇ, ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ಇವರ ನಿವೃತ್ತಿ ಜೀವನವು ಸುಖಮಯವಾಗಿರಲೆಂಬುದು ಅವರ ಹಿತೈಷಿಗಳ ಹಾರೈಕೆ.