ಪುತ್ತೂರು: 66 ವರ್ಷಗಳ ಇತಿಹಾಸವಿರುವ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಶೇಷ ಸಾಧನೆಗೆ ಎಸ್ಸಿಡಿಸಿಸಿ ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಆ.30ರಂದು ಮಂಗಳೂರಿನಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷ ಡಿ. ತೀರ್ಥಾನಂದ ದುಗ್ಗಳ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿರಿಜಾ ಕೆ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಗೊಟ್ಟು, ಎಸ್.ಎನ್.ಮನ್ಮಥ, ಎಸ್.ಬಿ.ಜಯರಾಮ ರೈ, ಸಹಕಾರ ಸಂಘಗಳ ಉಪನಿಬಂಧಕ ರಮೇಶ್, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಜನಾರ್ಧನ ಗೌಡ ಪಿ., ನಿರ್ದೇಶಕರುಗಳಾದ ಸತೀಶ್ ಪಾಂಬಾರು,ರಾಜೇಶ್ ಗೌಡ ಕುದ್ಕುಳಿ,ಅಣ್ಣಪ್ಪ ನಾಯ್ಕ,ಪ್ರವೀಣ ಜಿ.ಕೆ.,ಕರಿಯ, ಜಲಜಾಕ್ಷಿ ಮಾಧವ ಗೌಡ,ಸುನಂದಾ ಲೋಕನಾಥ ಗೌಡ,ಪ್ರೇಮಾ ಗಂಗಾಧರ ಗೌಡ ಉಪಸ್ಥಿತರಿದ್ದರು.
ವಿಶೇಷ ಸಾಧನೆ
ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವು 2013-14ರಿಂದ 2016-17 ರ ತನಕ ಶೇ.100 ವಸೂಲಾತಿ ಹಾಗೂ 2017-18ರಲ್ಲಿ ಪ್ರೋತ್ಸಾಹಕ ಪ್ರಶಸ್ತಿ, 2018-19ರಲ್ಲಿ ಶೇ.100 ವಸೂಲಾತಿ , 2019-20 ರಿಂದ 2024-25 ವಿಶೇಷ ಪ್ರೋತ್ಸಾಹ ಪ್ರಶಸ್ತಿಯನ್ನು ಪಡೆದುಕೊಂಡು ಬಂದಿದೆ.ಸಂಘವು ಈ ವರ್ಷ ಶೇ.99.30 ವಸೂಲಾತಿ ಸಾಧನೆ ಮಾಡಿದೆ.