ಡಿ.ಜೆ ನಿಷೇಧ, ಡಿಸೆಬಲ್ ಮಿತಿಯಲ್ಲೇ ಧ್ವನಿವರ್ಧಕ ಬಳಕೆ ವಿಶೇಷ
ನೃತ್ಯ ಭಜನೆ- ಗೊಂಬೆ ಕುಣಿತ, ಸ್ತಬ್ದ ಚಿತ್ರಗಳು ವಿಶೇಷ ಆಕರ್ಷಣೆ
ನಾಲ್ಕು ದಿನ ಮಧ್ಯಾಹ್ನದಿಂದ ರಾತ್ರಿಯ ತನಕ ನಿರಂತರ ಅನ್ನದಾನ
ಕೊನೆಯ ದಿನ 20 ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಪ್ರಸಾದ ವಿತರಣೆ
ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಾಲ್ಕು ದಿನಗಳ ಕಾಲ ಪೂಜಿಸಲ್ಪಟ್ಟ 59ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆಯು ಆ.30ರಂದು ಹಲವು ಆಕರ್ಷಕ ಸ್ತಬ್ದ ಚಿತ್ರಗಳು, ಕುಣಿತ ಭಜನೆ, ಗೊಂಬೆಕುಣಿತದ ವೈಭವದಿಂದ ನಡೆಯಿತು. ವಿಶೇಷವಾಗಿ ಕಾನೂನಿನ ಚೌಕಟ್ಟಿನಂತೆ ಡಿ.ಜೆ ನಿಷೇಧವಾಗಿತ್ತು. ಡಿಸೆಬಲ್ ಮಿತಿಯಲ್ಲೇ ಧ್ವನಿವರ್ಧಕ ಬಳಕೆ ಮಾಡಲಾಗಿತ್ತು.

ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಶೋಭಾಯಾತ್ರೆಯ ಮುನ್ನ ಸಮಿತಿ ಪ್ರಮುಖರು ದೇವಳದ ಗಣಪತಿ ಗುಡಿಯಲ್ಲಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಸತ್ಯಧರ್ಮ ನಡೆಯಲ್ಲಿ ಶೋಭಾಯಾತ್ರೆಯು ನಿರ್ವಿಘ್ನವಾಗಿ ನಡೆಯುವಂತೆ ಪ್ರಾರ್ಥನೆ ಮಾಡಿದರು. ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಗುರು ತಂತ್ರಿಯವರು ಶ್ರೀ ಗಣೇಶನ ವಿಗ್ರಹಕ್ಕೆ ಮಂಗಳಾರತಿ ಮಾಡಿ, ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ರವೀಂದ್ರ ನುಳಿಯಾಲು, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಭ್ಳೆ, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವನಾಥ ಗೌಡ, ಸಹಜ್ ರೈ ಬಳಜ್ಜ, ಸುಧೀರ್ ಶೆಟ್ಟಿ, ಸತೀಶ್ ನಾಕ್, ಕೋಶಾಧಿಕಾರಿ ಶ್ರೀನಿವಾಸ್ ಮೂಲ್ಯ, ಜೊತೆ ಕಾರ್ಯದರ್ಶಿ ನೀಲಂತ್, ನಿಕಟಪೂರ್ವ ಕಾರ್ಯದರ್ಶಿ ಚಂದ್ರಶೇಖರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮಚಂದ್ರ ಕಾಮತ್ ಸಹಿತ ಹಲವಾರು ಮಂದಿ ಪ್ರಮುಖರು ತೆಂಗಿನ ಕಾಯಿ ಒಡೆದರು. ಮೂಷಿಕ ವಾಹನದಲ್ಲಿ ದಯಾನಂದ ಚಾಲಕರಾಗಿ ಸಹಕರಿಸಿದರು.

ಈ ಸಂದರ್ಭದಲ್ಲಿ ಗಣೇಶನ ವಿಗ್ರಹ ರಚನೆ ಮಾಡಿದ ಶ್ರೀನಿವಾಸ್ ಪೈ, ಮೂಷಿಕವಾಹನ ರಥವನ್ನು ಹೂವಿನಿಂದ ಅಲಂಕರಿಸಿದ ಸುರೇಂದ್ರ ಅಚಾರ್ಯ, ಪ್ರಸಾದ ಪ್ಯಾಕ್, ಅನ್ನಪ್ರಸಾದ ವಿತರಣೆ ಸಹಿತ ಹಲವಾರು ಕಾರ್ಯದಲ್ಲಿ ಹಗಲಿರುಳು ದುಡಿದವರಿಗೆ, ಸ್ವಯಂ ಸೇವಕರಿಗೆ ತಂತ್ರಿಗಳು ಪ್ರಸಾದ ನೀಡಿದರು. ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪುತ್ತೂರು ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಶೇಖರ್ ಬ್ರಹ್ಮನಗರ, ಗೌರವ ಸಲಹೆಗಾರರಾದ ರಾಜೇಶ್ ಬನ್ನೂರು, ಭಾಮಿ ಜಗದೀಶ್ ಶೆಣೈ, ಚಂದ್ರಶೇಖರ್ ಪರ್ಲಡ್ಕ, ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ್ ಆಚಾರ್ಯ, ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ಕಿರಣ್ ಶಂಕರ್ ಮಲ್ಯ, ಆನಂದ ನೆಕ್ಕರೆ, ಚಂದ್ರಶೇಖರ್ ಎಸ್, ಉದಯ ಹೆಚ್, ಶ್ರೀಧರ್ ಪಟ್ಲ, ದಿನೇಶ್ ಪಂಜಿಗ, ಅಜಿತ್ ರೈ ಹೊಸಮನೆ, ರೂಪೇಶ್ ಕೊಂಬೆಟ್ಟು, ಶೇಖರ್ ಬನ್ನೂರು, ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ಜಯಶ್ರೀ ಎಸ್ ಶೆಟ್ಟಿ, ಚಂದ್ರಶೇಖರ್ ಪಿ, ಸಚಿನ್ ಶೆಣೈ, ಕರುಣಾಕರ್ ಶೆಟ್ಟಿ, ಉದಯ ಆದರ್ಶ, ನಾರಾಯಣ ಆದರ್ಶ, ನಿತಿನ್ ಆದರ್ಶ, ಶ್ರೀಕಾಂತ್ ಕಂಬಳಕೋಟಿ, ಅಶೋಕ್ ಬ್ರಹ್ಮನಗರ, ಪವನ್ ಕುಮಾರ್, ವಿಶ್ವನಾಥ ಕುಲಾಲ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ಉಪಾಧ್ಯಕ್ಷ ಸಂತೋಷ್ ರೈ ಕೈಕಾರ, ವಿಶ್ವಕರ್ಮ ಮಹಿಳಾ ವೇದಿಕೆ ಅಧ್ಯಕ್ಷೆ ಇಂದಿರಾ ಪುರಷೋತ್ತಮ ಆಚಾರ್ಯ, ನ್ಯಾಯವಾದಿ ಮಾದವ ಪೂಜಾರಿ, ಮನೀಶ್ ಬಿರ್ವ, ಅಜಿತ್ ರೈ ಹೊಸಮನೆ, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಬೆಳ್ಳಿಪ್ಪಾಡಿ, ಸ್ಯಾಕ್ಸಾಪೋನ್ ವಾದಕ ಪಿ.ಕೆ.ಗಣೇಶ್, ನಾಗೇಂದ್ರ ಬಾಳಿಗ, ಗಣೇಶ್ ನೈತ್ತಾಡಿ, ಪ್ರಶಾಂತ್ ಕೆಮ್ಮಾಯಿ, ನಾಗೇಶ್ ಟಿ.ಎಸ್, ಈ ಸಂದರ್ಭ ಉಪಸ್ಥಿತರಿದ್ದರು. ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯ ಕೆ.ಜೀವಂಧರ್ ಜೈನ್, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ ಸಹಿತ ಹಲವಾರು ಮಂದಿ ಸೇರಿಕೊಂಡರು. ಶ್ರೀ ಗಣೇಶನ ವಿಗ್ರಹವನ್ನು ಹೊತ್ತಿರುವ ಮೂಷಿಕ ರಥವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಹೊರಟು, ರೈಲ್ವೇ ನಿಲ್ದಾಣ ರಸ್ತೆಯಾಗಿ ಹಾರಾಡಿಯಿಂದ ಬೊಳುವಾರಿಗೆ ತೆರಳಿ ಅಲ್ಲಿಂದ ವೈವಿಧ್ಯಮಯ ಸ್ತಬ್ದಚಿತ್ರಗಳೊಂದಿಗೆ ಅದ್ಧೂರಿಯ ಶೋಭಾಯಾತ್ರೆ ಪ್ರಾರಂಭಗೊಂಡು ಮುಖ್ಯರಸ್ತೆಯಾಗಿ ದರ್ಬೆಗೆ ತೆರಳಿತು. ಅಲ್ಲಿಂದ ಪರ್ಲಡ್ಕ ಎಂ.ಟಿ.ರಸ್ತೆಯಾಗಿ ಕೋರ್ಟ್‌ರಸ್ತೆಯಾಗಿ ತೆರಳಿ ಶ್ರೀಧರ್ ಭಟ್ ಅಂಗಡಿಯ ಬಳಿಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರು ಭಾಗದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ತಂಭನಗೊಳ್ಳುವ ಮೂಲಕ ಉತ್ಸವ ಸಂಪನ್ನಗೊಂಡಿತ್ತು.

ಕಣ್ಮನ ಸೆಳೆಯುವ 10ಕ್ಕೂ ಮಿಕ್ಕಿ ವೈವಿಧ್ಯಮಯ ಸ್ತಬ್ಥ ಚಿತ್ರಗಳು:
ಶೋಭಾಯಾತ್ರೆಯಲ್ಲಿ ಕಣ್ಮನ ಸೆಳೆಯುವ 10ಕ್ಕೂ ಮಿಕ್ಕಿ ವೈವಿಧ್ಯಮಯ ಸ್ತಬ್ದ ಚಿತ್ರಗಳು ಆಕರ್ಷಣಿಯವಾಗಿತ್ತು. ರಾಜ್ಯಪ್ರಶಸ್ತಿ ವಿಜೇತ ಪಿ.ಕೆ ಗಣೇಶ್ ಅವರ ನೇತೃತ್ವದಲ್ಲಿ ಸ್ಯಾಕ್ಸೋಫೋನ್ ವಾದನವು ಶ್ರೀ ಗಣೇಶ ವಿಗ್ರಹದ ಜೊತೆ ಸಾಗಿತ್ತು. ನೃತ್ಯ ಭಜನೆ, ಚೆಂಡೆ ನೃತ್ಯ ವಿವಿಧ ಧಾರ್ಮಿಕ ಪೌರಾಣಿಕ ಹಿನನ್ನೆಲೆಯ ಕಥೆಯನ್ನು ಸಾರುವ ಸ್ತಬ್ದ ಚಿತ್ರಗಳು ಶೋಭಾಯಾತ್ರೆಗೆ ಹೆಚ್ಚಿನ ಮೆರುಗು ನೀಡಿತ್ತು. ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ದಾರಿಯುದ್ದಕ್ಕೂ ಅಲ್ಲಲ್ಲಿ ಜನ ಸಾಲು ಸಾಲಾಗಿ ನಿಂತು ಶೋಭಾಯಾತ್ರೆಯ ದೃಶ್ಯಗಳನ್ನು ವೀಕ್ಷಣೆ ಮಾಡುತ್ತಿದ್ದರು. ಶೋಭಾಯಾತ್ರೆಯ ಎದುರು ಭಾರತ ಮಾತೆ ಮತ್ತು ಬಾಲಗಂಗಾಧರ ತಿಲಕ್ ಅವರ ಭಾವಚಿತ್ರದ ಹೊತ್ತಿರುವ ವಾಹನ ಅದರ ಹಿಂದೆ ವಿವಿಧ ಸ್ತಬ್ಧಚಿತ್ರಗಳು ತಮ್ಮ ತಮ್ಮ ಅಭಿನವನ್ನು ಪ್ರದರ್ಶಿಸುತ್ತ ಮುಂದೆ ಸಾಗಿದವು. ಕಬಕದ ಮಹಾದೇವಿ ಯುವಕ ಮಂಡಲದವರು ಆಪರೇಷನ್ ಸಿಂದೂರದಲ್ಲಿ ಬಳಸಲಾದ ಬ್ರಹ್ಮೋಸ್ ಪ್ರದರ್ಶನ, ಪಡ್ನೂರು ಜನಾರ್ದನ ಯುವಕ ಮಂಡಲ ಮತ್ತು ಸರಸ್ವತಿ ಯುವತಿ ಮಂಡಲದಿಂದ ಕಲ್ಲಡ್ಕದ ಶಿಲ್ಪ ಗೊಂಬೆ ಬಳಗದ ನೃತ್ಯ, ಕುಂಡಡ್ಕ ವಿಷ್ಣುಮೂರ್ತಿ ನಗರ ಶ್ರೀಕೃಷ್ಣ ಯುವಕ ಮಂಡಲ ಕುಣಿತ ಭಜನೆ, ಆಂಜನೇಯ ಮಿತ್ರವೃಂದ ಬೊಳುವಾರು ಇವರಿಂದ ಗಜ ವಾಹನ, ಪಂಚಮುಖಿ ಕೋರ್ಟ್‌ರಸ್ತೆಯಿಂದ ಮಹಾಗಪತಿಯಿಂದ ಮಾಯಾವಿ ರಾಕ್ಷಸನ ಸಂಹಾರ, ವಿಶ್ವಹಿಂದು ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸಂಘಟನೆಯಿಂದ ಸಹಾಸ್ ಶೆಟ್ಟಿ ಸಹಿತ ಹುತಾತ್ಮರ ಚಿತ್ರದ ಜೊತೆಯಲ್ಲಿ ಮತ್ತು ವರಾಹ ರೂಪದಿಂದ ಹಿರಣ್ಯಾಕ್ಷ ಮರ್ದನ ಪ್ರದರ್ಶನ, ಆದರ್ಶ ಆಸ್ಪತ್ರೆ ವೈದ್ಯರು, ನೌಕರರು, ಮೆಡಿಕಕಲ್ ಡಿಸ್ಟ್ರಿಬ್ಯೂಟರ್ ವತಿಯಿಂದ ಭದ್ರಕಾಳಿಯಿಂದ ರಕ್ತಬೀಜಾಸುರ ವಧೆ. ತ್ರಿಶೂಲ್ ಪ್ರೆಂಡ್ಸ್ ನಿಂದ ವಾಯಿಲಿನ್ ಚೆಂಡೆ ನೃತ್ಯ, ನಡುಮುಂದಿಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಸಮಿತಿ ಬ್ರಹ್ಮನಗರದ ಡಾ. ಪ್ರಸಾದ್ ಭಂಡಾರಿ ಅಭಿಮಾನಿ ಬಳಗದವರಿಂದ ನರಸಿಂಹ ಅವತಾರ, ಕ್ಯಾಂಪ್ಕೋ ಚಾಕಲೇಟ್ ನೌಕರರ ಸಂಘದಿಂದ ಹನೂಮಂತನಿಂದ ರಾಕ್ಷಸ ಸಂಹಾರ, ಸಾಲ್ಮರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ ಮತ್ಸಾವತಾರ, ಬೆಟ್ಟಂಪಾಡಿ ಭಜನಾ ತಂಡದಿಂದ ನೃತ್ಯ ಭಜನೆ ವಿಶೇಷ ಆಕರ್ಷಣೆಯಾಗಿತ್ತು. ದಾರಿಯುದ್ದಕ್ಕೂ ಭಕ್ತರು ಭಕ್ತಿ ಭಾವದಿಂದ ಶ್ರೀ ಗಣೇಶನ ಶೋಭಾಯಾತ್ರೆಯನ್ನು ನೋಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪ್ರತಿ ದಿನ ಮಧ್ಯಾಹ್ನ ಪೂಜೆಯ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯುತ್ತಿದ್ದು, ರಾತ್ರಿಯ ತನಕವೂ ಅನ್ನಸಂತರ್ಪಣೆ ವಿತರಿಸಲಾಗುತ್ತಿತ್ತು. ಕೊನೆಯ ದಿನ ಸುಮಾರು 20ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಪ್ರತಿ ದಿನ ಮಧ್ಯಾಹ್ನ ಪಲ್ಲಪೂಜೆಯ ಬಳಿಕ ಮಹಾಪೂಜೆ ಮತ್ತು ಅನ್ನಪ್ರಸಾದ ವಿತರಣೆ ನಡೆಯುತ್ತಿತ್ತು.

ಡಿ.ಜೆ ನಿಷೇಧ, ಡಿಸೆಬಲ್ ಮಿತಿಯಲ್ಲೇ ಧ್ವನಿವರ್ಧಕ ಬಳಕೆ:
ಶೋಭಯಾತ್ರೆಯಲ್ಲಿ ಡಿ.ಜೆ ನಿಷೇಧಿಸಲಾಗಿದ್ದು, ಈ ಭಾರಿ ಸಂಗೀತ ನೃತ್ಯದ ಡಿ.ಜೆ ಸೌಂಡ್ ಇರಲಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಡಿಸೆಬಲ್ ಮಿತಿಯಲ್ಲೇ ಧ್ವನಿವರ್ಧಕ ಬಳಕೆ ಮಾಡಲಾಗಿತ್ತು. ಎಲ್ಲಾ ಸ್ತಬ್ದ ಚಿತ್ರಗಳಲ್ಲೂ ಅವರ ಪ್ರದರ್ಶನ ಮಾಹಿತಿ ನೀಡಲಾಗುತ್ತಿತ್ತಾದರೂ ಧ್ವನಿವರ್ಧಕ ಮಿತಿಯಲ್ಲೇ ಬಳಸಲಾಗಿತ್ತು.



