ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

ರೂ.494.66 ಕೋಟಿ ವ್ಯವಹಾರ, ರೂ.2.95 ಕೋಟಿ ಲಾಭ, ಶೇ.19 ಡಿವಿಡೆಂಡ್

ಪುತ್ತೂರು:ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.494.66 ಕೋಟಿ ವ್ಯವಹಾರ ನಡೆಸಿ ದಾಖಲೆಯ ರೂ.2.95 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಗರೀಷ್ಠ ಶೇ.19 ಡಿವಿಡೆಂಡ್ ವಿತರಿಸಲಾಗುವುದು ಸಂಘದ ಅಧ್ಯಕ್ಷ ನವೀನ್ ಡಿ. ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಸಭೆಯು ಆ.31ರಂದು ಸಂಘದ ರೈತ ಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದು ಅವರು ಮಾತನಾಡಿ, 112 ವರ್ಷಗಳ ಇತಿಹಾಸವಿರುವ ಸಂಘವು ಆನಾಜೆ ಹಾಗೂ ಕೈಂದಾಡಿಯಲ್ಲಿ ಶಾಖೆಯನ್ನು ಹೊಂದಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಂಡಿದೆ. 2024-25ನೇ ಸಾಲಿನ ಆರ್ಥಿಕ ವರ್ಷಾಂತ್ಯಕ್ಕೆ ಸಂಘವು 4,773 ಮಂದಿ ಸದಸ್ಯರಿಂದ ರೂ.6,14,15,480 ಪಾಲು ಬಂಡವಾಳ ಹೊಂದಿದೆ. ರೂ.50,38,34,559 ಠೇವಣಿಗಳನ್ನು ಹೊಂದಿದೆ. ರೂ.88,75,59,861 ಸಾಲ ವಿತರಿಸಲಾಗಿದೆ. ಡಿಸಿಸಿ ಬ್ಯಾಂಕ್‌ನಿಂದ 61,54,77,382 ಸಾಲ ಪಡೆದುಕೊಂಡಿದೆ. ಸದಸ್ಯರ ಸಾಲ ವಸೂಲಾತಿಯಲ್ಲಿ ಶೇ.97.67 ಸಾಧನೆ ಮಾಡಿದೆ. ಒಟ್ಟು ರೂ.494.66 ಕೋಟಿ ವ್ಯವಹಾರ ನಡೆಸಿ ರೂ.2,95,02,719 ಲಾಭಗಳಿಸಿದೆ. ಆಡಿಟ್ ವರ್ಗಿಕರಣದಲ್ಲಿ `ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘದ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಕೊಡಲ್ಪಡುವ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಭಾಜನವಾಗಿರುತ್ತದೆ ಎಂದರು.


ಮುಂದಿನ ಯೋಜನೆಗಳು:
ಸಂಘದ ನೂತನ ನಿವೇಶನದಲ್ಲಿ ರೂ.7 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಚೇರಿ ಕಟ್ಟಡ, ಗೋದಾಮು ಹಾಗೂ ಸಭಾಂಗಣ ನಿರ್ಮಿಸಿ ಸಾರ್ವಜನಿಕ ಸೇವೆ ಒದಗಿಸುವ ಗುರಿಯಿದೆ. ಇದಕ್ಕಾಗಿ ಹಿರಿಯ ಸದಸ್ಯರಲ್ಲಿ ಚರ್ಚಿಸಿ ಸೂಕ್ತ ರೂಪು ರೇಷೆಗಳ ಮೂಲಕ ಕಾರ್ಯರೂಪಕ್ಕೆ ತರಲಾಗುವುದು. ಒಂದೇ ಸೂರಿನಡಿಯಲ್ಲಿ ಹಲವು ಸೇವೆ ನೀಡು ಸಿಎಸ್‌ಸಿ ಸೆಂಟರ್ ಪ್ರಾರಂಭ, ನೂತನ ನಿವೇಶನದಲ್ಲಿ ಸೂಪರ್ ಮಾರ್ಕೇಟ್ ಸೇವೆ, ಕೈದಾಂಡಿ ಮತ್ತು ನೂತನ ನಿವೇಶನದಲ್ಲಿ ಕೊಳವೆ ಬಾವಿ ತೆರೆಲಾಗುವುದು ಎಂದು ಅಧ್ಯಕ್ಷ ನವೀನ್ ತಿಳಿಸಿದರು.


ಪೇಪರ್ ಚಾರ್ಜ್ ಹಿಂದಿನಂತೆ ಮಾಡಿ;
ಸಂಘದ ಮುಖಾಂತರ ಸಾಲ ಪಡೆಯುವವರಿಗೆ ಸಾಲದ ಅರ್ಧ ಪರ್ಸೆಂಟ್ ಮೊತ್ತ ಪೇಪರ್ ಚಾರ್ಜ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಜನ ಸಾಮಾನ್ಯರಿಗೆ ಹೊರೆಯಾಗುತ್ತಿದ್ದು ಅದನ್ನ ಕಡಿಮೆ ಮಾಡುವಂತೆ ರವೀಂದ್ರ ರೈ ಆಗ್ರಹಿಸಿದರು. ಇತರ ಎಲ್ಲ ಸಹಕಾರ ಸಂಘಗಳಲ್ಲಿರುವಂತೆ ಎಲ್ಲರ ಸಲಹೆ ಪಡೆದುಕೊಂಡು ದರ ನಿಗಧಿಪಡಿಸಲಾಗಿದೆ. ಅಲ್ಲದೆ ಬಹಳ ವರ್ಷದ ಬಳಿಕ ಏರಿಕೆ ಮಾಡಲಾಗಿದೆ ಎಂದು ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿದರು. ಸಂಘವು ಅಧಿಕ ಲಾಭ ಪಡೆದುಕೊಂಡಿದೆ. ಹೀಗಾಗಿ ಏರಿಕೆ ಮಾಡುವುದು ಬೇಡ. ಇತರ ಸಂಘಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಈ ಹಿಂದಿನ ದರದಲ್ಲಿಯೇ ಮಾಡುವಂತೆ ಸದಸ್ಯ ಹೊನ್ನಪ್ಪ ಪೂಜಾರಿ ಒತ್ತಾಯಿಸಿದರು. ಹಿಂದಿನ ಖರ್ಚಿಗೂ ಈಗಿನ ಖರ್ಚಿಗೂ ಬಹಳಷ್ಟು ವ್ಯತ್ಯಾಸವಿದೆ. ಹಾಗಾಗಿ ಏರಿಕೆ ಮಾಡಲಾಗಿದೆ ಎಂದು ಅಧ್ಯಕ್ಷ ನವೀನ್ ತಿಳಿಸಿದರು. ಸ್ಟಾö್ಯ ಚಾರ್ಜ್ ಹಿಂದಿಗಿಂತ ಡಬ್ಬಲ್ ಆಗಿದೆ. ಅದರ ಮೊತ್ತ ಕಡಿಮೆ ಮಾಡುವಂತೆ ನಿರ್ಣಯ ಕೈಗೊಳ್ಳುವಂತೆ ಸುರೇಶ್ ಪ್ರಭು ಶೆಟ್ಟಿಮಜಲು, ಸುಬ್ರಾಯ ಶೆಟ್ಟಿಮಜಲು ಮೊದಲಾದವರು ಒತ್ತಾಯಿಸಿದರು.


ಆ್ಯಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿ;
ರೈತರ ಅಭಿವೃದ್ಧಿಯಲ್ಲಿ ಸಹಕಾರಿ ಸಂಘವು ಪ್ರಮುಖ ಪಾತ್ರವಹಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರೇ ಅಧಿಕವಾಗಿರು ನರಿಮೊಗರು, ಶಾಂತಿಗೋಡು ಗ್ರಾಮದ ರೈತರಿಗಾಗಿ ತುರ್ತು ಸೇವೆಗೆ ಸಂಘದ ಮುಖಾಂತರ ಆ್ಯಂಬ್ಯುಲೆನ್ಸ್ ಸೇವೆ ಪ್ರಾರಂಭಿಸುವಂತೆ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಇಂದಿರಾನಗರ ಮನವಿ ಮಾಡಿದರು. ಬ್ಯಾರೀಕೇಡ್ ನೀಡುವಂತೆ ಈ ಹಿಂದೆ ಮನವಿ ಮಾಡಿದ್ದು ಅದನ್ನು ಒಗಿಸಲಾಗಿದೆ. ಅಲ್ಲದೆ ಪುರುಷರಕಟ್ಟೆಯ ಗಣೇಶೋತ್ಸವದ ಬೆಳ್ಳಿ ಹಬ್ಬಕ್ಕೆ ದೇಣಿಗೆ ನೀಡಿ ಸಹಕರಿಸಿರವುದಕ್ಕೆ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.


ಶೂನ್ಯ ಬಡ್ಡಿ ಸಾಲ ಕೂಡಲೇ ಅನುಷ್ಠಾನ ಮಾಡಬೇಕು:
ಸರಕಾರಿ ಪ್ರಥಮ ಬಜೆಟ್‌ನಲ್ಲಿ ಶೂನ್ಯ ಬಡ್ಡಿಯ ಸಾಲನವನ್ನು ರೂ.3ರಿಂದ ರೂ.5 ಲಕ್ಷಕ್ಕೆ ಏರಿಕೆ ಹಾಗೂ ಶೇ.3 ಬಡ್ಡಿಯ ಸಾಲವನ್ನು ರೂ.10ರಿಂದ ರೂ,15ಲಕ್ಷಕ್ಕೆ ಏರಿಕೆ ಮಾಡಿತ್ತು. ಆದರೆ ಅದು ಅನುಷ್ಠಾನವಾಗಿಲ್ಲ. ಈ ವರ್ಷದ ಅಧಿಕ ಮಳೆಯಿಂದಾಗಿ ಅಡಿಕೆಗೆ ಕೊಳೆ ರೋಗ ಬಾಧಿಸಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಏರಿಕೆ ಮಾಡಿರುವ ಶೂನ್ಯ ಬಡ್ಡಿಯ ಸಾಲವನ್ನು ಕೂಡಲೇ ಅನುಷ್ಠಾನ ಮಾಡುವಂತೆ ಸದಸ್ಯ ಪ್ರವೀಣ್ ನಾಯ್ಕ್ ಸೇರಾಜೆ ಒತ್ತಾಯಿಸಿದರು. ಇದರ ಬಗ್ಗೆ ಸರಕಾಕ್ಕೆ ಮನವಿ ಮಾಡುವುದಾಗಿ ತೀರ್ಮಾನಿಸಿದರು.‌


ಜಿಲ್ಲೆಯಲ್ಲಿಯೇ ನರಿಮೊಗರುನಲ್ಲಿ ಅತೀ ಹೆಚ್ಚು ಡಿವಿಡೆಂಡ್:
ಸಂಘದ ಲಾಭಾಂಶದಲ್ಲಿ ಭಾಂಶದಲ್ಲಿ ಸದಸ್ಯರಿಗೆ ಶೇ.19 ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ಈ ವರ್ಷ ಸಂಘವು ಅತೀ ಹೆಚ್ಚು ರೂ.2.95ಕೋಟಿ ಲಾಭಗಳಿಸಿದ್ದು ಶೇ.21 ಡಿವಿಡೆಂಡ್ ನೀಡುವಂತೆ ಹೊನ್ನಪ್ಪ ಪೂಜಾರಿ ಕೈಂದಾಡಿ ಒತ್ತಾಯಿಸಿದರು. ಜಿಲ್ಲೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ನರಿಮೊಗರು ಸಹಕಾರ ಸಂಘದಲ್ಲಿ ಅತಿ ಹೆಚ್ಚು ಶೇ.19 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ನವೀನ್ ತಿಳಿಸಿದರು.


ಆನಡ್ಕ, ಮುಕ್ವೆಯಲ್ಲಿ ಶಾಖೆ ಪ್ರಾರಂಭಿಸಿ:
ಸದಸ್ಯರ ಅನುಕೂಲಕ್ಕಾಗಿ ಸಂಘದ ವ್ಯಾಪ್ತಿಯ ಆನಡ್ಕ ಹಾಗೂ ಮುಕ್ವೆಯಲ್ಲಿ ಶಾಖೆ ಪ್ರಾರಂಭಿಸುವಂತೆ ವಸಂತ ಗೌಡ ಸೇರಾಜೆಯವರು ಆಗ್ರಹಿಸಿದರು.


ಬೆಳೆ ವಿಮೆ ಮೊತ್ತ ಏರಿಕೆ ಮಾಡಿ:
ಈ ವರ್ಷ ಕೊಳೆ ರೋಗದಿಂದಾಗಿ ಅಡಿಕೆ ಕೃಷಿಕರು ಕಂಗಾಲಾಗಿದ್ದು ಬೆಳೆ ವಿಮೆ ಯೋಜನೆಯಲ್ಲಿ ರೈತರಿಗೆ ನೀಡುವ ವಿಮಾ ಮೊತ್ತವನ್ನು ಏರಿಕೆ ಮಾಡುವಂತೆ ಬೆಳಿಯಪ್ಪ ಗೌಡ ಒತ್ತಾಯಿಸಿದರು. ಸಂಘದ ಮುಖಾಂತರವೇ ಬೆಲೆ ಸಮೀಕ್ಷೆ ಮಾಡುವಂತೆ ಪ್ರವೀಣ್ ನಾೖಕ್‌ ಸೇರಾಜೆ ಒತ್ತಾಯಿಸಿದರು.
ಸದಸ್ಯರಾದ ರತ್ನಾಕರ ಬಿ.ಎಸ್., ನವೀನ್ ರೈ ಶಿಬರ, ಕೃಷ್ಣಪ್ರಸಾದ್ ಕೆದಿಲಾಯ, ಗಂಗಾಧರ ಸುವರ್ಣ, ವೃಷಭರಾಜ ಜೈನ್, ದೀಪ್ತಿ, ಯಶೋಧ, ಕರುಣಾಕರ ಎಂ.ಎಸ್. ರಾಮಕೃಷ್ಣ ಭಟ್ ಸಹಿತ ಹಲವು ಮಂದಿ ವಿವಿಧ ಅನಿಸಿಕೆಗಳನ್ನು ತಿಳಿಸಿದರು.


ಮರಣ ಸಾಂತ್ವನ ನಿಧಿ ವಿತರಣೆ:
ಸಂಘದಿಂದ ಮೃತಪಟ್ಟ ಸಾಲಗಾರ ಸದಸ್ಯರಿಗೆ ನೀಡುವ ಮರಣ ಸಾಂತ್ವನ ನಿಧಿಯನ್ನು ಇತ್ತೀಚೆಗೆ ಮೃತಪಟ್ಟ ಚಂದ್ರಶೇಖರ್ ಕೆದ್ಕಾರ್ ಅವರ ಕುಟುಂಬಸ್ಥರಿಗೆ ನೀಡಲಾಯಿತು.


ಶೇರು ಪತ್ರ, ಲಕ್ಷನಿಧಿ ಪ್ರಮಾಣ ಪತ್ರ ವಿತರಣೆ:
ಸಂಘದಿಂದ ನೂತನವಾಗಿ ಪ್ರಾರಂಭಿಸಲಾದ ಲಕ್ಷ ನಿಧಿ ಯೋಜನೆಯ ಪ್ರಮಾಣ ಪತ್ರ ಹಾಗೂ ಸದಸ್ಯರಿಗೆ ಷೇರು ಪ್ರಮಾಣ ಪತ್ರವನ್ನು ಸಭೆಯಲ್ಲಿ ವಿತರಿಸಲಾಯಿತು.


ಸನ್ಮಾನ:
ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದ ಹಿರಿಯ ಸದಸ್ಯರಾದ ನಾಗೇಶ ತಂತ್ರಿ, ದಿನೇಶ್ ಹೆಬ್ಬಾರ್, ವೇದನಾಥ ಸುವರ್ಣ, ನಾಗರಾಜ ಕೆ., ಐತ್ತಪ್ಪ ನಾಯ್ಕ, ರಾಘವನ್, ಸಂಜೀವ ಗೌಡ, ಕಿಶೋರ್ ನಾಯ್ಕ್, ರಮೇಶ್ ಬೈಪಾಡಿತ್ತಾಯ, ಲಿಂಗಪ್ಪ ಸಪಲ್ಯ, ಸಂಜೀವ ನಾಯಕ್, ಸೀತಾರಾಮ ಗೌಡ, ಮೋಹಮ ಗೌಡ ಎಸ್.ಪಿ., ವಸಂತ ಗೌಡ, ಅಣ್ಣು ಪೂಜಾರಿ, ಮೋಹನ್ ನಾಯಕ್, ಸದಾನಂದ ನಾಯಕ್, ಲೀಲಾವತಿ, ಹೇಮಾವತಿ, ತುಳಸಿ ಎಸ್., ಡೊಂಬಯ್ಯ ಪೂಜಾರಿ ಎಸ್., ರಾಮ ಹೆಗ್ಡೆ ಡಿ., ಅನಂತರಾಮ ರಾವ್, ಸದಾಶಿವ ರೈ ಹಾಗೂ ಮಾಂಕು ಯಾನೆಮಾಧವ ಗೌಡರವರನ್ನು ಸನ್ಮಾನಿಸಲಾಯಿತು.


ನಿರ್ದೇಶಕರಾದ ಪರಮೇಶ್ವರ ಭಂಡಾರಿ ಮಣಿಯ, ಬಾಬು ಶೆಟ್ಟಿ ವೀರಮಂಗಲ, ಪ್ರವೀಣ್ ಕುಮಾರ್ ಶೆಟ್ಟಿ, ದೇವಪ್ಪ ಗೌಡ ಓಲಾಡಿ, ದೇವಪ್ಪ ಪಜಿರೋಡಿ, ಶಿವಪ್ರಸಾದ್ ನಾಯ್ಕ, ಚಂದ್ರ ಮಣಿಯ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ವಸಂತ ಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸದಸ್ಯ ವಸಂತಿ ಪ್ರಾರ್ಥಿಸಿದರು. ಅಧ್ಯಕ್ಷ ನವೀನ್ ಡಿ. ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ ಹೆಚ್. ಲೆಕ್ಕಪರಿಶೋದನಾ ವರದಿ, ಆಯ-ವ್ಯಯಗಳನ್ನು ಮಂಡಿಸಿದರು. ಲೆಕ್ಕಿಗ ಸಂದೀಪ್ ಕೆ. ವಾರ್ಷಿಕ ವರದಿ ಮಂಡಿಸಿದರು.ಉಪಾಧ್ಯಕ್ಷೆ ಪವಿತ್ರ ಕೆ.ಪಿ., ನಿರ್ದೇಶಕರಾದ ವಿಶ್ವನಾಥ ಬಲ್ಯಾಯ, ನಮಿತಾ ಸನ್ಮಾನಿತರ ಪರಿಚಯ ಮಾಡಿದರು. ನಿರ್ದೇಶಕ ಜಯರಾಮ ಪೂಜಾರಿ ಒತ್ತೆಮುಂಡೂರು ವಂದಿಸಿದರು. ಸಿಬ್ಬಂದಿಗಳಾದ ಜಯರಾಮ ಬಿ., ರೋಹಿತ್ ಪಿ., ಅಶ್ವಿತಾ ಎ. ರೇಶ್ಮಾ ಎಂ., ನಳಿನಿ ಬಿ.ಕೆ., ಮೇಘ, ಜಿತೇಶ್ ಎಸ್. ಶ್ರಾವ್ಯ ಎ. ಸಹಕರಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಉಪಾಹಾರ ಹಾಗೂ ಮಧ್ಯಾಹ್ನ ಭೋಜನವನ್ನು ಏರ್ಪಡಿಸಿದ್ದರು.

ದೀರ್ಘಾವಧಿ ಸಾಲವನ್ನು 8ರಿಂದ 10 ವರ್ಷಕ್ಕೆ ಏರಿಕೆ ಮಾಡಲಾಗಿದೆ. ದಾಖಲೆಯ ಶೇ.97.67 ಸಾಲ ವಸೂಲಾತಿಯಾಗಿದೆ. ಠೇವಣಿಗಳಿಗೆ ಶೇ.5 ಹೆಚ್ಚವರಿ ಬಡ್ಡಿ ನೀಡಲಾಗುತ್ತಿದೆ. 232 ಸದಸ್ಯರ ಸಂಖ್ಯೆ ಏರಿಕೆ ಮಾಡಲಾಗಿದೆ. ರೂ.413 ಕೋಟಿಯ ವ್ಯವಹಾರವನ್ನು 494 ಕೋಟಿಗೆ ಏರಿಕೆ ಮಾಡಲಾಗಿದೆ. ರೂ.4.75 ಕೋಟಿ ಇದ್ದ ಸುಸ್ತಿ ಸಾಲವು ರೂ.2.06ಕೋಟಿಗೆ ಇಳಿಕೆಯಾಗಿದೆ. ಸಂಘದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗುವುದು. ರೈತರ ಕೃಷಿ ಪುನಶ್ಚೇತನಕ್ಕಾಗಿ ಉಚಿತ ಕಾರ್ಯಾಗಾರ ಆಯೋಸಲಾಗಿದೆ. 75 ಕಂತುಗಳ ಹೂಡಿಕೆಯ ಲಕ್ಷ ನಿಧಿ ಎಂಬ ಹೊಸ ಯೋಜನೆ ಪ್ರಾರಂಭಿಸಲಾಗಿದೆ.
-ನವೀನ್ ಡಿ., ಅಧ್ಯಕ್ಷರು

ಸಂಘದ ಸಾಧನೆಗೆ ಅಭಿನಂದನೆಗಳ ಸುರಿಮಳೆ:
ಸಹಕಾರಿ ಸಂಘದ ಸೇವೆ, ಕೊಡುಗೆ, ದೇಣಿಗೆ, ಸಾಧನೆ ಹಾಗೂ ಸಂಘದ ಸಾಧನೆಗೆ ಸತತ ಎಂಟು ವರ್ಷಗಳಿಂದ ಡಿಸಿಸಿ ಬ್ಯಾಂಕ್‌ನಿಂದ ಪ್ರಶಸ್ತಿ ಪಡೆದುಕೊಂಡಿರುವ ಸಹಕಾರಿ ಸಂಘಕ್ಕೆ ಮಹಾಸಭೆಯಲ್ಲಿ ಸದಸ್ಯರಾದ ಸುರೇಶ್ ಪ್ರಭು, ಬೆಳಿಯಪ್ಪ ಗೌಡ, ಸುಬ್ರಾಯ ಶೆಟ್ಟಿಮಜಲು, ಯಶೋಧ, ದೀಪ್ತಿ, ಉಮೇಶ್ ಇಂದಿರಾನಗರ, ರಾಮಕೃಷ್ಣ ಭಟ್ ಮೊದಲಾದವರು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here