ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯಿಂದ ಮಧ್ಯಾಹ್ನ ೨ರಿಂದ ಭರತನಾಟ್ಯ, ೩ರಿಂದ ಸಾಂಸ್ಕೃತಿಕ ವೈವಿಧ್ಯ, ಸಂಜೆ ೫.೩೦ರಿಂದ ಸ್ಯಾಕ್ಸೋಫೋನ್, ರಾತ್ರಿ ೮ರಿಂದ ಸಾಂಸ್ಕೃತಿಕ ವೈವಿಧ್ಯ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಶ್ರೀ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲೂಕಿನಿಂದ ಬೆಳಿಗ್ಗೆ ೯ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡನೆ ಜನಾಗ್ರಹ ಸಭೆ
ತೆಂಕಿಲ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ `ಬಿಝ್‌ಬ್ಲೂಮ್ ಫೆಸ್ಟ್ ೨೦೨೫’
ನೆಹರೂ ನಗರದ ಮಾಸ್ಟರ್ ಪ್ಲಾನರಿಯ ಸರ್. ಯಂ. ವಿ. ಸಭಾಭವನದಲ್ಲಿ ಸಂಜೆ ೫.೩೦ಕ್ಕೆ ಸ್ನೇಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸರ್ವಸದಸ್ಯರ ಮಹಾಸಭೆ
ಕೊಂಬೆಟ್ಟು ಸರಕಾರಿ ಪಿಯು ಕಾಲೇಜಿನಲ್ಲಿ ರೋಟರಿ ಈಸ್ಟ್, ರೋಟರಿ ಟೆಂಪಲ್ ಟೆರೇಸ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ
ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾಸೇವೆ, ರಂಗಪೂಜೆ
ಬಿ.ಸಿ. ರೋಡು ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಬಳಿ ಬೆಳಿಗ್ಗೆ ೧೦.೩೦ಕ್ಕೆ ತಾಲೂಕು ಕೃಷಿಕ ಸಮಾಜ ಬಂಟ್ವಾಳದ ನೂತನ ಕಟ್ಟಡ ಕೃಷಿಕ ಸಮಾಜ ಭವನ ಉದ್ಘಾಟನೆ