ಪುತ್ತೂರು: ಸರ್ಕಾರಿ ಮಹಿಳಾ ಕಾಲೇಜಿನ ನೂತನ ಕಟ್ಟಡದ ಕಾಮಗಾರಿ ಶೀಘ್ರ ಮುಗಿಸಿಕೊಡುವಂತೆ ಪೋಷಕ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡದ ಕಾಮಗಾರಿಯನ್ನು ಶೀಘ್ರ ಮುಗಿಸಿಕೊಡುವಂತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಪೋಷಕರ ಸಂಘದ ಪದಾಧಿಕಾರಿಗಳು ಹಾಗೂ ಇತರೆ ಪೋಷಕರು ಶಾಸಕರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದರು.

ಮನವಿಯಲ್ಲಿ ಏನಿದೆ!?

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಕಾರ್ಯನಿರ್ವಹಿಸುತ್ತಿರುವ ಪ್ರಸ್ತುತ ಕಟ್ಟಡದಲ್ಲಿ ಹಲವಾರು ಸಮಸ್ಯೆಗಳಿವೆ ಮಾತ್ರವಲ್ಲದೆ ಈ ಕಟ್ಟಡ ಶೀಘ್ರದಲ್ಲಿಯೇ ಕುಸಿಯುವ ಎಲ್ಲಾ ಸಾಧ್ಯತೆಗಳಿವೆ. ಕಾಲೇಜಿನಲ್ಲಿ ಒಟ್ಟು 532 ಹಿಂದುಳಿದ ವರ್ಗದ ಹಾಗೂ ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸೇರಿದ ಮಹಿಳಾ ವಿದ್ಯಾರ್ಥಿಗಳಿದ್ದು, ಪ್ರಸ್ತುತ ಲಭ್ಯವಿರುವ ಕಟ್ಟಡವು ಸುಮಾರು 150 ವರ್ಷಗಳಷ್ಟು ಹಳೆಯದಾಗಿದ್ದು, ತೀರಾ ಶಿಥಿಲಗೊಂಡಿದೆ ಹಾಗೂ ಒಂದು ಭಾಗ ಕುಸಿಯುತ್ತಿದೆ. ಇದು ಮುಂದೆ ಅಪಾಯಕಾರಿ ಪರಿಣಾಮ ಉಂಟುಮಾಡುವ ಸಮಸ್ಯೆಯಿದೆ. 6+1=7) ಕಾಲೇಜಿನಲ್ಲಿ ಬಿ ಎ – (ಅಗತ್ಯ ತರಗತಿಗಳು 3+1 = 4) ಬಿಕಾಮ್ ಎರಡು ಬ್ಯಾಚ್ (ಅಗತ್ಯ ತರಗತಿಗಳು ಹಾಗೂ ಗ್ರಂಥಾಲಯ, ಪ್ರಾಂಶುಪಾಲರ ಕೊಠಡಿ, ಕಚೇರಿ, ಕಂಪ್ಯೂಟರ್ ಲ್ಯಾಬ್ ಉಪನ್ಯಾಸಕರ ಕೊಠಡಿ ಎಂದು ಒಟ್ಟು 16 ತರಗತಿಗಳ ಅಗತ್ಯವಿದೆ. ಆದರೆ ಪ್ರಸ್ತುತ ಬರೇ ತೀರಾ ಶಿಥಿಲಗೊಂಡಿರುವ ಕಟ್ಟಡದ 9 ಕೊಠಡಿಗಳು ಲಭ್ಯವಿವೆ. ಸಿಮೆಂಟ್ ಶೀಟ್ ಹಾಕಿ ಹೊಲೊಬ್ರಿಕ್ ಗಳಿಂದ ಕಟ್ಟಲಾದ 4 ಕೊಠಡಿಗಳಲ್ಲಿ ತಲಾ ತರಗತಿಗೆ 70-80 ವಿದ್ಯಾರ್ಥಿಗಳಿಗೆ ಬೋಧನೆ ನಡೆಯುತ್ತಿದೆ. ಎರಡು ತರಗತಿಗಳನ್ನು ತೀರಾ ಟೆಂಪರರಿ ಶೀಟ್ ಹಾಕಿದ ಕೋಣೆಯಲ್ಲಿ ನಡೆಸಲಾಗುತ್ತಿದೆ. ಕಾಲೇಜಿನಲ್ಲಿ ಕಲಿಯುತ್ತಿರುವ ನಮ್ಮ ಮಕ್ಕಳು ಒಟ್ಟು 532 ಮಹಿಳಾ ವಿದ್ಯಾರ್ಥಿಗಳಿದ್ದು ಅವರಿಗೆ ಯಾವುದೇ ಸೂಕ್ತ ಶೌಚಾಲಯ ವ್ಯವಸ್ಥೆಯಾಗಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಸರಿಯಾಗಿ ಇರುವುದಿಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯದ ಹಾಗೂ ಆರೋಗ್ಯದ ದೃಷ್ಟಿಯಿಂದ ಭಾರಿ ಹಾನಿಕಾರಕವಾಗಿದೆ. 19.08.2025 ರಂದು ಪುತ್ತೂರು ಸಾರ್ವಜನಿಕ ಆಸ್ಪತ್ರೆ ವಿಭಾಗದಿಂದ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ “ಈ ಭೂಮಿಯನ್ನು (ಪ್ರಸ್ತುತ ಕಾಲೇಜು ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಇರುವ) ಅವರಿಗೆ ಬರೆದು ಕೊಟ್ಟಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ಈ ಕಟ್ಟಡವನ್ನು ಡೆಮಾಲಿಶ್ ಮಾಡಲು ಒತ್ತಡ ಇದೆ” ಎಂದು ಮೌಖಿಕವಾಗಿ ತಿಳಿಸಿರುವುದು ಗಮನಕ್ಕೆ ಬಂದಿದೆ. ಇದರಿಂದ ಕಾಲೇಜಿನ ಭವಿಷ್ಯ ಡೋಲಾಯಮಾನವಾಗಿದೆ ಹಾಗೂ ನಮ್ಮ ಮಕ್ಕಳ ಮುಂದಿನ ಹೆಜ್ಜೆ ಏನೆಂದು ತಿಳಿಯದೆ ಗೊಂದಲವಾಗಿದೆ.
ಇದೇ ಪರಿಸ್ಥಿತಿ ಮುಂದುವರೆದರೆ ಪ್ರಸ್ತುತ ಇರುವ ವಿದ್ಯಾರ್ಥಿಗಳು ಕಾಲೇಜನ್ನು ಬಿಟ್ಟು ತೆರಳುವ ಸಾಧ್ಯತೆಗಳಿದ್ದು, ಮುಂದಿನ ಸರ್ಕಾರದ ಎಲ್ಲಾ ಉದ್ದೇಶಗಳು ವಿಫಲವಾಗಬಹುದು.

ಕಟ್ಟಡದ ಕಾಮಗಾರಿಯು ಆರಂಭಗೊಂಡಿದ್ದು, ಅದು ಎರಡು ವರ್ಷಗಳಿಂದ ತೀರಾ ನಿಧಾನ ಗತಿಯಲ್ಲಿ ಸಾಗುತ್ತಿರುವುದು ಅತೀವ ದುಃಖದ ವಿಚಾರವಾಗಿದೆ. ಮಕ್ಕಳಿಗೆ ಶೀಘ್ರವಾಗಿ ಹೊಸ ಕಟ್ಟಡ ಸಿಗಬಹುದು ಎಂಬ ಆಸೆಯಿಂದ ನಾವು ಇಲ್ಲಿ ಮಕ್ಕಳಿಗೆ ಪ್ರವೇಶ ನೀಡಿರುತ್ತೇವೆ. ಪುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ಕಾಲೇಜಿಗೆ ಮಂಜೂರಾದ 153 ಎಕರೆ ಜಾಗದಲ್ಲಿ ಕಾಲೇಜಿನ ಕಟ್ಟಡ ನಿರ್ಮಾಣ ಆರಂಭವಾಗಿದೆ. ಈಗಾಗಲೇ ಇಲಾಖೆಯಿಂದ ಸುಮಾರು ರುಪಾಯಿ 9 ಕೋಟಿ ಹಣ ಈ ಕೆಲಸಕ್ಕೆ ಮಂಜೂರಾಗಿದ್ದು ಅದು ಸದ್ಬಳಕೆಯಾಗುವಂತೆ ನೋಡಿಕೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here