ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
8ನೇ ತರಗತಿಯ ಅಭಯ ಟಿ ಎಸ್ ಮತ್ತು 10ನೇ ತರಗತಿಯ ಈಶಾನ್ ಎನ್ ಎಸ್ ಇವರು ಆರ್ಟಿಸ್ಟಿಕ್ ಪೇರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 8ನೇ ತರಗತಿಯ ಅನ್ವರ್ಥ್ ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅಭಯ ಮತ್ತು ಈಶಾನ್ ಇವರು ರಿದಮಿಕ್ ಪೇರ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಯೋಗ ಶಿಕ್ಷಕರಾದ ಅಶೋಕ್ ತರಬೇತಿ ನೀಡಿರುತ್ತಾರೆ.