ಪುತ್ತೂರು: ಕರ್ನಾಟಕ ಸರಕಾರ ಡಾ. ಗಂಗೂಬಾಯಿ ಹಾನಗಲ್ ಪ್ರದರ್ಶಕ ಲೆಗಳ ವಿಶ್ವ ವಿದ್ಯಾನಿಲಯ ಮೈಸೂರು ಇದರ ವತಿಯಿಂದ 2025ರ ಮೇ ತಿಂಗಳಿನಲ್ಲಿ ನಡೆದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಶ್ರೀಕೃಷ್ಣ ಕಲಾ ಕೇಂದ್ರ ಕಾಣಿಯೂರು ಇದರ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶೇ.100 ಫಲಿತಾಂಶ ಲಭಿಸಿದೆ.
ಸಂಸ್ಥೆಯ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ತರಬೇತಿ ನೀಡಿರುತ್ತಾರೆ. ಕಾಣಿಯೂರು ರಾಶಿ ಕಾಂಪ್ಲೆಕ್ ಮ್ಹಾಲಕ ಚಂದ್ರಶೇಖರ ಗೌಡ ಮತ್ತು ಜ್ಞಾನೇಶ್ವರಿ ದಂಪತಿ ಪುತ್ರಿ ರಾಶಿ ಸಿ.ಕೆ., ಸವಣೂರು ಕೆಡೆಂಜಿ ತೀರ್ಥರಾಮ ಮತ್ತು ವಿಜಯ ಕೆ ದಂಪತಿ ಪುತ್ರಿ ಮಾನ್ವಿ ಕೆ.ಟಿ., ಕುದ್ಮಾರು ದೋಳ ಪದ್ಮನಾಭ ಡಿ ಮತ್ತು ಸತ್ಯಪ್ರಿಯಾ ದಂಪತಿ ಪುತ್ರಿ ಸಮನ್ವಿ ಪಿ.ಡಿ., ಕಾಣಿಯೂರು ನೇರೋಳ್ತಡ್ಕ ರವಿ ಕುಮಾರ್ ಮತ್ತು ಯಶೋಧ ದಂಪತಿ ಪುತ್ರಿ ಸಿಂಚನಾ ಎನ್., ಸವಣೂರು ಉಮೇಶ ಮತ್ತು ಶೀಲಾವತಿ ದಂಪತಿ ಪುತ್ರಿ ಮೋಕ್ಷಾ ಯು.ಕೆ., ಸವಣೂರು ಲಕ್ಷ್ಮಣ ಗೌಡ ಮತ್ತು ಅನಿತಾ ದಂಪತಿ ಪುತ್ರಿ ಹಿತೈಷಿ ಎಲ್.ಕೆ., ಕುದ್ಮಾರು ಗೋಪಾಲಕೃಷ್ಣ ಮತ್ತು ನಳಿನಿ ದಂಪತಿ ಪುತ್ರಿ ಸಾತ್ವಿಕ್ ಜಿ.ಕೆ., ಕಾಣಿಯೂರು ಪೆರ‍್ಲೋಡಿ ರೋಹಿತಾಶ್ವ ಮತ್ತು ಗಾಯತ್ರಿ ದಂಪತಿ ಪುತ್ರಿ ಜೇಷ್ಠಾ ಪಿ., ಕಾಣಿಯೂರು ಮಾದೋಡಿ ಗಿರಿಯಪ್ಪ ಮತ್ತು ಗೌರಿ ದಂಪತಿ ಪುತ್ರಿ ಯಶಸ್ವಿನಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.