ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಆಯೋಜಿಸಿದ ನೃತ್ಯಾಂತರಂಗ 134ರ ಸರಣಿಯಲ್ಲಿ ಉಡುಪಿಯ ಡಾ.ಮಂಜರಿಚಂದ್ರರವರ ಶಿಷ್ಯೆ ಸಾಯಿ ಅನ್ನಪೂರ್ಣಿಯವರ ಭರತನಾಟ್ಯ ಮನೋಜ್ಞವಾಗಿ ಮೂಡಿಬಂತು.

ಅಭ್ಯಾಗತರಾಗಿ ಆಗಮಿಸಿದ ಭರತನಾಟ್ಯ ಕಲಾವಿದೆ ವಿದುಷಿ ಸುಸ್ಮಿತ ಯತೀಶ್ ಆಚಾರ್ಯರವರು ಕಾರ್ಯಕ್ರಮವನ್ನು ಶ್ಲಾಘಿಸಿದರು. ವಿಷ್ಣುಪ್ರಿಯ ನಿರೂಪಣೆ ಮಾಡಿದರು. ಸನ್ನಿಧಿ, ಧೃತಿ, ಮಾನ್ವಿ ಕಜೆ, ಪ್ರಾಪ್ತಿ, ಅನ್ವಿತ ಕಾರ್ಯಕ್ರಮದ ವಿವಿಧ ಭಾಗಗಳನ್ನು ನಿರ್ವಹಿಸಿದರು.
