ಪುತ್ತೂರು:ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಜ್ಜಿಕಲ್ಲು ಒಕ್ಕೂಟದ ನೇತೃತ್ವದಲ್ಲಿ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಏಕತ್ತಡ್ಕ ಸ.ಹಿ.ಪ್ರಾ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ಹಾಗೂ ಶಾಲಾ ಕೈತೋಟ ರಚನೆಯು ಆ.30ರಂದು ನಡೆಯಿತು.
ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಚಾಲನೆ ನೀಡಿದರು. ಒಳಮೊಗ್ರು ಗ್ರಾ. ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸಂಘದ ಸ್ವಚ್ಚತಾ ಸಂಚಾಲಕ ತಿರುಮಲೇಶ್ ನಾಯ್ಕ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಮೋಹನ್ ನಾಯ್ಕ ಮುಂಡೋವುಮೂಲೆ, ಮುಖ್ಯ ಗುರು ಚಿತ್ರಾ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಯ ಮೇಲ್ವಿಚರಕ ಸುಹಾನ್ ಗೌಡ, ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷೆ ಸರೋಜ ದೇವಸ್ಯ, ಜಿಲ್ಲಾ ಕಾರ್ಯದರ್ಶಿ ವಿಮಾಲ ಮಹಾಲಿಂಗ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಘದಿಂದ ಅಂಗನವಾಡಿ ಮಕ್ಕಳಿಗೆ ಡ್ರಾಯಿಂಗ್ ಬುಕ್ ವಿತರಿಸಲಾಯಿತು. ಬಳಿಕ ಶಾಲಾ ವಠಾರ, ಅಂಗನವಾಡಿ ಕೇಂದ್ರದ ಸುತ್ತಮುತ್ತಲಿನ ಪರಿಸರ ಹಾಗೂ ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ವಠಾರದಲ್ಲಿ ಸ್ವಚ್ಚತಾ ಮಾಡಲಾಯಿತು. ಒಳಮೊಗ್ರು ಗ್ರಾ.ಪಂ ಸದಸ್ಯ ಮಹೇಶ್ ಕೇರಿ ಸ್ವಾಗತಿಸಿದರು. ಶ್ರೀಧರ್ ನಾಯ್ಕ ಮುಂಡೋವುಮೂಲೆ ವಂದಿಸಿದರು.