ಸವಣೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು, ಸವಣೂರಿನ ಇತಿಹಾಸ ವಿಭಾಗದ ಜಂಟಿ ಆಶ್ರಯದಲ್ಲಿ ರಾಣಿ ಅಬ್ಬಕ್ಕ 500 ಪ್ರೇರಣಾದಾಯಿ ಉಪನ್ಯಾಸಗಳ ಸರಣಿ-ಎಸಳು 40 ಕಾರ್ಯಕ್ರಮ ಸೆ.4ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್.ಎಲ್ ಶೆಟ್ಟಿ ಮಾತನಾಡಿ, ಇತಿಹಾಸ ಅಧ್ಯನದ ಮಹತ್ವವನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ , ಉಪನ್ಯಾಸವನ್ನು ನೀಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯ ಸಹ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ರವರು, ಉಳ್ಳಾಲವನ್ನು ಆಳ್ವಿಕೆ ಮಾಡಿದ ರಾಣಿ ಅಬ್ಬಕ್ಕನ ಸಾಧನೆಯನ್ನು ತಿಳಿಸುವುದರೊಂದಿಗೆ ಅವಳ ದೇಶಪ್ರೇಮವನ್ನು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ಪದಾಧಿಕಾರಿ ಡಾ. ಪ್ರಮೋದ್ ಎಂ.ಜಿ ಸ್ವಾಗತಿಸಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಸಂಘಟಕ ಸ್ವಸ್ತಿಕ್ ಕೆ ವಂದಿಸಿದರು.
ವೇದಿಕೆಯಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜಲಕ್ಷ್ಮೀ ಎಸ್.ರೈ, ಉಪಪ್ರಾಂಶುಪಾಲ ಶೇಷಗಿರಿ ಎಂ, ಐ.ಕ್ಯೂ.ಎ.ಸಿ ಸಂಘಟಕಿ ಕೌಸಲ್ಯ , ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರತಿಭಾ ಎಸ್, ಕಲಾ ವಿಭಾಗದ ವಿದ್ಯಾರ್ಥಿ ಸಂಘಟಕ ಸ್ವಸ್ತಿಕ್ ಕೆ ಉಪಸ್ಥಿತರಿದ್ದರು.