ಪುತ್ತೂರು: ಪುತ್ತೂರು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಡಿ ಕಾರ್ಯಕರ್ತೆ-2 ಹಾಗೂ ಸಹಾಯಕಿ-37 ಹುದ್ದೆ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸೆ.1ರಿಂದ ಸೆ.10ರ ಸಂಜೆ 5.30ರ ತನಕ ಆನ್ಲೈನ್ ವೆಬ್ಸೈಟ್ ವಿಳಾಸ https://karnemakaone.kar.nic.in/abcd/ ದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆಗಳು: ಕಡಬ ತಾಲೂಕಿನ ಶಿರಾಡಿ ಗ್ರಾಮದ ಪದಂಬಳ ಹಾಗೂ ಬಿಳಿನೆಲೆ ಗ್ರಾಮದ ಕೈಕಂಬ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ.
ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಗುಂಡಿಜಾಲು, ಶಾಂತಿಗೋಡು ಗ್ರಾಮದ ಪೇರಡ್ಕ, ನಗರಸಭಾ ವ್ಯಾಪ್ತಿಯ ಬಾಲವನ, ಬನ್ನೂರು ಗ್ರಾಮಪಂಚಾಯತ್, ರಾಗಿದಕುಮೇರು, ಬೊಳುವಾರು, ಪಡೀಲು, ಚಿಕ್ಕಮುಡ್ನೂರು ಗ್ರಾಮದ ಬೀರಿಗ, ನರಿಮೊಗರು ಗ್ರಾಮದ ನರಿಮೊಗರು, ಹಿರೆಬಂಡಾಡಿ ಗ್ರಾಮದ ಸೀಂಕ್ರುಕೊಡಂಗೆ, ಬೊಳ್ಮುಡ, ಅಡೆಕಲ್, ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು, ಉಪ್ಪಿನಂಗಡಿ ಪೇಟೆ, ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆದ್ರಾಡಿ, ಮೇನಾಲ, ನೆಲ್ಲಿತ್ತಡ್ಕ, ಇರ್ದೆ ಗ್ರಾಮದ ದೂಮಡ್ಕ, ಕಬಕ ಗ್ರಾಮದ ಕಬಕ ಶಾಲೆ, ಪದೆಂಜಾರು, ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ, ಬಡಗನ್ನೂರು ಗ್ರಾಮದ ಕೊಯಿಲ, ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ, ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪನ್ನ, ಪುಳಿಕುಕ್ಕು, ಕಲ್ಲಂತಡ್ಕ, ಕಡಬ ತಾಲೂಕಿನ ಕೊಯಿಲ ಗ್ರಾಮದ ಕುದುಲೂರು, 102ನೆಕ್ಕಿಲಾಡಿ ಗ್ರಾಮದ ನಡುಮಜಲು, ಸವಣೂರು ಗ್ರಾಮದ ಪೆರಿಯಡ್ಕ, ನೂಜಿಬಾಳ್ತಿಲ ಗ್ರಾಮದ ಅಡೆಂಜ, ಪೆರಾಬೆ ಗ್ರಾಮದ ಮನವಳಿಕೆ-2, ಕುಂತೂರು ಗ್ರಾಮದ ಕುಂತೂರುಪದವು, ಚಾರ್ವಾಕ ಗ್ರಾಮದ ನಾಣಿಲ, ಕಾಯಿಮಣ ಗ್ರಾಮದ ಮರಕ್ಕಡ, ಪಾಲ್ತಾಡಿ ಗ್ರಾಮದ ಬಂಬಿಲ, ಬೆಳಂದೂರು ಗ್ರಾಮದ ಪಳ್ಳತ್ತಾರು ಹಾಗೂ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಅಂಗನವಾಡಿಯಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ-08251298788 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.