ಸೇನಾ ಆಯ್ಕೆಯ ಪೂರ್ವ ಸಿದ್ಧತಾ ತರಬೇತಿ: ಅರ್ಹರಿಂದ ಅರ್ಜಿ ಆಹ್ವಾನ

0

ಉಪ್ಪಿನಂಗಡಿ: ಭಾರತೀಯ ಸೇನೆ ಸೇರಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಬಾಲಕರಿಗೆ ಸೇನಾ ಆಯ್ಕೆಯ ಪೂರ್ವ ಸಿದ್ಧತೆಯ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ ವಸತಿ ಸೌಲಭ್ಯದೊಂದಿಗೆ ನೀಡಲಾಗುತ್ತಿದ್ದು, 2025-26 ನೇ ಸಾಲಿನ ಎರಡನೇ ತಂಡದ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಹಿಂದುಳಿದ ವರ್ಗಕ್ಕೆ ಸೇರಿದ ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರುವ 3/9/2005 ರಿಂದ 3/10/2008 ರ ಅವಧಿಯೊಳಗೆ ಜನಿಸಿರುವ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 4 ತಿಂಗಳಾವಧಿಯ ಈ ತರಬೇತಿಯ ಅವಧಿಯಲ್ಲಿ ಸೇನಾ ನೇಮಕಾತಿಗೆ ಬೇಕಾದ ದೈಹಿಕ ಕ್ಷಮತೆಯನ್ನು ಮೂಡಿಸುವ ತರಬೇತಿ, ವೃತ್ತಿ ಮಾರ್ಗದರ್ಶನ ತರಬೇತಿಯನ್ನು ನೀಡಿ ಸೇನಾ ನೇಮಕಾತಿ ಪ್ರಕ್ರಿಯೆಗೆ ಸದೃಢಗೊಳಿಸಲಾಗುವುದು.


ತರಬೇತಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ತರಬೇತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ನೀಡಲಾಗುವುದು. ಅರ್ಜಿಯನ್ನು ಆಯಾ ತಾಲೂಕು ಅಥವಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಆನೆಗುಂಡಿ ರಸ್ತೆ, ಬಿಜೈ ಕಾಪಿಕಾಡ್ ಮಂಗಳೂರು . ದ.ಕ 575004 ಇಲ್ಲಿಗೆ ಖುದ್ದು ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3/10/2025. ಹೆಚ್ಚಿನ ಮಾಹಿತಿಗಾಗಿ 0824-2225078 ನ್ನು ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here