ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ, ಕೆ.ವೈ.ಎಂ.ಎ ಆಶ್ರಯದಲ್ಲಿ ಲೋಕ ಪ್ರವಾದಿ ಮುಹಮ್ಮದ್(ಸ.ಅ) ಅವರ 1500ನೇ ಜನ್ಮ ದಿನಾಚರಣೆ ಪ್ರಯುಕ್ತ ಮಿಲಾದ್ ರ್ಯಾಲಿ ಸೆ.5ರಂದು ನಡೆಯಿತು.
ರೆಂಜಲಾಡಿ ಮಸೀದಿಯ ಅಧ್ಯಕ್ಷ ಆರ್ ಎಂ ಅಲಿ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜೈನುದ್ದೀನ್ ಹಾಜಿ ಜೆ ಎಸ್ ಜಾಥಾಗೆ ಚಾಲನೆ ನೀಡಿದರು. ಸ್ಥಳೀಯ ಖತೀಬ್ ನಾಸಿರ್ ಫೈಝಿ ದುವಾ ನೆರವೇರಿಸಿದರು. ನಾಸಿರ್ ಫೈಝಿ ಹಾಗೂ ಸದರ್ ಅಬೂಬಕ್ಕರ್ ಮುಸ್ಲಿಯಾರ್ ಮೌಲೀದ್ ಗೆ ನೇತೃತ್ವ ನೀಡಿದರು.
ಕಡ್ಯ ಗೌಸಿಯ ಮದರಸದಿಂದ ಕಲ್ಪನೆ ಕೆಜಿಎನ್ ಕಾಂಪ್ಲೆಕ್ಸ್ ವರೆಗೆ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು. ಗೌಸಿಯಾ ಮದರಸ ವಿದ್ಯಾರ್ಥಿಗಳು, ಯಂಗ್ ಮೆನ್ಸ್ ಕಮಿಟಿಯವರು, ಆದರ್ಶ ಸೇವಾ ಸಂಘದವರು ಹಾಗೂ ಜಮಾಅತರು ಭಾಗವಹಿಸಿದ್ದರು.