ಪುತ್ತೂರು: ಹರ್ಷೋದಯ ಜ್ಯುವೆಲ್ಸ್ ಮಾಲಕ, ದರ್ಬೆ ನಿವಾಸಿ ಹರಿಶ್ಚಂದ್ರ ಆಚಾರ್ಯ ಅವರ ಪತ್ನಿ ಸುಚಿತ್ರಾ ಹರಿಶ್ಚಂದ್ರ ಆಚಾರ್ಯ(ವ.47) ಅವರು ಸೆ.5ರ ರಾತ್ರಿ ಹೃದಯಾಘಾತದಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ವಿಶ್ವಕರ್ಮ ಮಹಿಳಾ ಮಂಡಲದ ಜೊತೆ ಕಾರ್ಯದರ್ಶಿಯಗಿದ್ದ ಅವರು ಕೋರ್ಟ್ ರಸ್ತೆಯಲ್ಲಿರುವ ಹರ್ಷೋದಯ ಜ್ಯುವೆಲ್ಸ್ನ್ನು ಮುನ್ನಡೆಸಲು ಪತಿಗೆ ಹೆಗಲು ನೀಡಿದ್ದರು.
ಮೃತರು ಪತಿ ಹರಿಶ್ಚಂದ್ರ ಆಚಾರ್ಯ ಹಾಗೂ ಪುತ್ರರಾದ ಸುಶಾಂತ್, ಶಮಂತ್ ಇವರನ್ನು ಅಗಲಿದ್ದಾರೆ.
