ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಗೆ ಸ್ವರ್ಣ ಕವಚ ನಿರ್ಮಾಣ : ಶಾಸಕ ಅಶೋಕ್‌ ರೈ ಕುಟುಂಬದಿಂದ ಪ್ರಥಮ ದೇಣಿಗೆ

0

ಪುತ್ತೂರು: ಮಠಂತಬೆಟ್ಟು ಶ್ರಿ ಮಹಿಷಮರ್ದಿನಿ ದೇವಿಗೆ ಸ್ವರ್ಣ ಕವಚ ನಿರ್ಮಾಣಕ್ಕೆ ಪ್ರಥಮ ದೇಣಿಗೆಯನ್ನು ಶಾಸಕ ಅಶೋಕ್ ರೈ ಕುಟುಂಬ ಸಮರ್ಪಿಸಿದರು.ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮ ಹಾಗೂ ಪೂಜಾ ವಿಧಿ ವಿಧಾನಗಳ ಬಳಿಕ ಶಾಸಕರು ದೇಣಿಗೆಯನ್ನು ಸಮರ್ಪಿಸಿದರು. ಅರ್ಚಕರಾದ ರಾಮಕೃಷ್ಣ ಭಟ್ ಪೂಜಾ ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕರ ಪತ್ನಿ ಸುಮಾ ಅಶೋಕ್ ರೈ, ಶಾಸಕರ ಪುತ್ರಿ ಡಾ.‌ರಿಧಿ ರೈ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ಚರ ಭಟ್, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಸಮಿತಿ ಸದಸ್ಯರಾದ ರಾಮಕೃಷ್ಣ ಭಟ್, ರೇಣುಕಾ, ಕೇಶವ ಭಂಡಾರಿ,ಕುಮಾರನಾಥ ಎಸ್, ಸತೀಶ್ ನಾಯ್ಕ್ ಮೋನಡ್ಕ, ದೇವುದಾಸ್ ಗೌಡ , ವಿಜಯನಾಯ್ಕ,ಯಮುನಾ ಡೆಕ್ಕಾಜೆ ವ್ಯವಸ್ಥಾಪಕ ಸಂತೋಷ್ ರೈ, ವಿಕ್ರಂ ಶೆಟ್ಟಿ, ಜಗನ್ನಾಥ ಶೆಟ್ಟಿ ನಡುಮನೆ, ಸಹಿತ ಪ್ರಮುಖರು ಹಾಗೂ ಗ್ರಾಮಸ್ಥರು‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here