ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸರ್ವಪಳ್ಳಿ ರಾಧಾಕೃಷ್ಣನ್ ರವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸರ್ವಪಳ್ಳಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಲಾಯಿತು. ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಎಲ್ಲಾ ಶಿಕ್ಷಕರಿಗೆ ಶಾಲು ಹೂವನ್ನು ನೀಡಿ ಗೌರವಿಸಿದರು. ಶೇಖ್ ಜಲಾಲುದ್ದೀನ್,ಹಾಫಿಳಾ,ದಿವ್ಯ, ನೂರ್ ಜಹಾನ್, ಅನ್ನಪೂರ್ಣೇಶ್ವರಿ,ಚೇತನಾ ಜೈನ್, ಎಲ್ಸಿ ಲಸ್ರಾದೊ, ಜಯಶ್ರೀ ಸಾಲ್ಯಾನ್, ಮಮತಾ ಆರ್, ಚಂದ್ರಾವತಿ, ಖುರ್ಷಿದ್, ವನಿತಾ ಶೆಟ್ಟಿ ಉಪಸ್ಥಿತರಿದ್ದರು.

ಗೌರವವನ್ನು ಸಲ್ಲಿಸಿದ ಸಂಚಾಲಕರಾಗಿ ಶಿಕ್ಷಕ ಜಲಾಲುದ್ದೀನ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಿಗೆ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿದರು ಹಾಗೂ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಗೌರವಿಸಿದರು. ಸ್ವಾಗತವನ್ನು ಫಾತಿಮತ್ ಶಬಾ ನೇರವೇರಿಸಿದರು ವಿದ್ಯಾರ್ಥಿಗಳಿಗೆ ಧನ್ಯವಾದವನ್ನು ಎಲ್ಸಿ ಲಸ್ರಾದೊ ಸಮರ್ಪಿಸಿದರು. ಶಾಲಾ ನಾಯಕಿ ಸನಾ ಕಾರ್ಯಕ್ರಮ ನಿರೂಪಿಸಿದರು.