ಪುತ್ತೂರು: ಎಸ್‌ಡಿಪಿಐ ಕೊಡಿಪ್ಪಾಡಿ ಘಟಕದ ನೂತನ ಕಛೇರಿ ಕೊಡಿಪ್ಪಾಡಿ ಆನಾಜೆಯಲ್ಲಿ ಉದ್ಘಾಟನೆಗೊಂಡಿದ್ದು, ಈ ಸಂದರ್ಭ ಕೊಡಿಪ್ಪಾಡಿ ಬ್ರಾಂಚ್ ಸಮಿತಿ ಆಧ್ಯಕ್ಷ ಫಾರೂಕ್ ಅರ್ಕ ಅವರ ಅಧ್ಯಕ್ಷತೆಯಲ್ಲಿ ಹಲವು ಮಂದಿ ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು.
ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ರವರು ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ, ಎಸ್.ಡಿ.ಪಿ.ಐ ಎಂಬ ಪಕ್ಷ ಕೇವಲ ಚುನಾವಣೆ ಬಂದಾಗ ಮಾತ್ರ ಕಾರ್ಯಕ್ರಮಗಳನ್ನು ನಡೆಸುವ ಪಕ್ಷ ಅಲ್ಲ ಬದಲಾಗಿ ಜನರ ಜೀವನದ ಆಗು-ಹೋಗುಗಳಿಗೆ ನಿರಂತರವಾಗಿ ಸ್ಪಂದಿಸುವ ಪಕ್ಷವಾಗಿದೆ ಎಂದ ಅವರು ನಾವು ವಕ್ಫ್ ಕಾನೂನಿನ ವಿರುಧ್ದ ದೇಶಾದ್ಯಂತ ಹೋರಾಟಗಳನ್ನು ಕೈಗೊಂಡಾಗ ರಾಷ್ಟೀಯ ಅಧ್ಯಕ್ಷರನ್ನು ಸುಳ್ಳು ಕೇಸಿನಲ್ಲಿ ಬಂಧಿಸುತ್ತಾರೆ. ರಾಜ್ಯ ಕಛೇರಿಗಳಿಗೆ ಇಡಿ ದಾಳಿಯಾಗುತ್ತದೆ. ನಾವು ಫ್ಯಾಸಿಸ್ಟರ ವಿರುಧ್ದ ತೀಕ್ಷ್ಣ ಮಾತುಗಳಲ್ಲಿ ಪ್ರಶ್ನಿಸಿದಾಗ, ಇಲ್ಲಿ ನಡೆದಂತಹ ವಂಶ ಹತ್ಯೆಯನ್ನು, ಬಾಂಬ್ ಸ್ಪೋಟಗಳಲ್ಲಿ ಸಂಘ ಪರಿವಾರದ ಕೈವಾಡದ ಬಗ್ಗೆ ಈ ದೇಶದ ಜನರಿಗೆ ಸ್ಪಷ್ಟತೆಯನ್ನು ನೀಡುವಾಗ ಇಲ್ಲಿನ ವ್ಯವಸ್ಥೆ ನಮ್ಮನ್ನು ಧಮನಿಸಲು ಪ್ರಯತ್ನಿಸುತ್ತಿದೆ. ನೀವು ಎಷ್ಟೇ ಧಮನಿಸಲು ಪ್ರಯತ್ನಿಸಿದರೂ ಫ್ಯಾಸಿಸ್ಟರ ವಿರುಧ್ದದ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳುತ್ತಲೇ ಇರುತ್ತದೆ ಎಂಬುದನ್ನು ಇಲ್ಲಿನ ಆಡಳಿತ ವರ್ಗ ಅರಿತುಕೊಳ್ಳುವುದು ಉತ್ತಮ ಎಂದು ಹೇಳಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿಧ್ದಾಂತವನ್ನು ಒಪ್ಪಿ ಹಲವು ಯುವಕರು ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸಭೆಯಲ್ಲಿ ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ಜೊತೆ ಕಾರ್ಯರ್ಶಿ ರಹೀಂ ಪುತ್ತೂರು, ಕಬಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸಿದ್ದೀಕ್ ಉರಿಮಜಲು, ಕಾರ್ಯದರ್ಶಿ ಎಂ.ಎಚ್ ಸದ್ದಾಂ, ಕೊಡಿಪ್ಪಾಡಿ ಬ್ರಾಂಚ್ ಸಮಿತಿ ಉಪಾಧ್ಯಕ್ಷರಾದ ರಹೀಂ ಆನಾಜೆ, ಕಾರ್ಯದರ್ಶಿ ಹಫೀಝ್ ಆನಾಜೆ, ಹಂಝ ಮದನಿ, ಅಬ್ದುಲ್ಲಾ ಮುಸ್ಲಿಯಾರ್, ಯೂಸುಫ್ ಮುರ, ಹಸೈನಾರ್ ಹಾಜಿ ಡೆಂಬೆಲೆ ಮಜ್ಮಾ, ಹಮೀದ್ ಹಾಜಿ ಕಬಕ ಮಜ್ಮಾ, ಹನೀಫ್ ಡೆಂಬೆಲೆ, ಅಬ್ದುಲ್ ರಹಿಮಾನ್ ಆನಾಜೆ, ಅಶ್ರಫ್ ಕಲೆಂಬಿ, ಮುರ ಪುತ್ತು ಉಪಸ್ಥಿತರಿದ್ದರು. ಕಬಕ ಬ್ಲಾಕ್ ಸಮಿತಿ ಉಪಾಧ್ಯಕ್ಷರಾದ ಅದ್ದು ಕೊಡಿಪ್ಪಾಡಿ ಸ್ವಾಗತಿಸಿ ವಂದಿಸಿದರು. ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷರಾದ ರಿಯಾಝ್ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು.