ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

0

ರೂ.233,10,46,338.00 ವ್ಯವಹಾರ -1,04,52,098.50 ನಿವ್ವಳ ಲಾಭ

ಸೆ.9ರಂದು ವಾರ್ಷಿಕ ಮಹಾಸಭೆ

ಪುತ್ತೂರು : 66 ವರ್ಷಗಳ ಇತಿಹಾಸವಿರುವ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ರೂ.233,10,46,338.00 ವ್ಯವಹಾರ ನಡೆಸಿ ರೂ.1,04,52,098.50 ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ ಅವರು ತಿಳಿಸಿದ್ದಾರೆ.

ಸಂಘದಲ್ಲಿ 3388 ಮಂದಿ ಸದಸ್ಯರಿದ್ದು,ರೂ.2 ,55,39,137.00 ಪಾಲು ಬಂಡವಾಳ ಮತ್ತು ರೂ.21,35,20,535.00 ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಅಲ್ಪಾವಧಿ,ಮಧ್ಯಮಾವಧಿ,ದೀರ್ಘಾವಧಿ, ಕೃಷಿ ಸಾಲ,ಕೃಷಿಯೇತರ ಸಾಲ,ಚಿನ್ನಾಭರಣ ಈಡಿನ ಸಾಲ,ಸ್ವಸಹಾಯ ಗುಂಪು ಸಾಲ,ಇತ್ಯಾದಿಗಳಿಗೆ ರೂ.18,67,04,158.00 ಸಾಲ ವಿತರಿಸಲಾಗಿದೆ.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ರೂ.17,21,10,750.00 ಸಾಲ ಪಡೆಯಲಾಗಿದೆ. ನಿಧನ ಹೊಂದಿದ ಸದಸ್ಯರಿಗೆ ರೂ.30,000.00 ಮರಣ ಸಾಂತ್ವನ ವಿತರಿಸಲಾಗಿದೆ.ನವೋದಯ ಸ್ವಸಹಾಯ ಗುಂಪಿನ 48 ಸದಸ್ಯರಿಗೆ ರೂ. 2,40,000.00 ಚೈತನ್ಯ ವಿಮೆ ಬಂದಿರುತ್ತದೆ,ರಾಜ್ಯ ಸರಕಾರದ ಯಶಸ್ವಿನಿ ಯೋಜನೆಯಲ್ಲಿ 14 ಸದಸ್ಯರಿಗೆ ರೂ.10,17,000.00 ವಿಮೆ ಬಂದಿದೆ ಎಂದು ಅಧ್ಯಕ್ಷ ತೀರ್ಥಾನಂದ ದುಗ್ಗಳ ತಿಳಿಸಿದ್ದಾರೆ.

ಕ್ಯಾಂಪ್ಕೋ ಸಹಯೋಗದೊಂದಿಗೆ ರಬ್ಬರ್,ಕೊಕ್ಕೊ ಖರೀದಿ
ಸಂಘದಲ್ಲಿ ಕ್ಯಾಂಪ್ಕೋ ಸಹಯೋಗದೊಂದಿಗೆ 773 ಕ್ವಿಂಟಾಳ್ ರಬ್ಬರ್,651 ಕ್ವಿಂಟಾಳ್ ಕೊಕ್ಕೋ ಖರೀದಿಸಲಾಗಿದೆ.ಪ್ರಧಾನ ಕಛೇರಿಯಲ್ಲಿ ಬ್ಯಾಂಕಿಂಗ್ ವ್ಯವಹಾರದ ಜತೆಗೆ ರಸಗೊಬ್ಬರ, ಜೀನಸು,ಕಟ್ಟಡ ಸಾಮಾಗ್ರಿ,ಪಿವಿಸಿ ಪೈಪ್ ಮತ್ತು ಬಿಡಿಭಾಗಗಳ ಮಾರಾಟ ಹಾಗೂ ಪಡಿತರ ವಿತರಣೆ ವ್ಯವಸ್ಥೆ ಹಾಗೂ ಪಾಲ್ತಾಡಿ ಶಾಖೆಯಲ್ಲಿಯೂ ಬ್ಯಾಂಕಿಂಗ್ ವ್ಯವಹಾರದ ಜತೆ ಪಡಿತರ ವಿತರಣೆ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ RTGS/NEFT ಸೌಲಭ್ಯ, ಎಸ್.ಎಂ.ಎಸ್.ಸೌಲಭ್ಯ ಕಲ್ಪಿಸಲಾಗಿದೆ ಎಂದು ತೀರ್ಥಾನಂದ ದುಗ್ಗಳ ತಿಳಿಸಿದ್ದಾರೆ.

ಸೆ.9 ಸಂಘದ ವಾರ್ಷಿಕ ಮಹಾಸಭೆ
ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಬೆಳಿಗ್ಗೆ 10.30ಕ್ಕೆ ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷರಾದ ತೀರ್ಥಾನಂದ ದುಗ್ಗಳ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಭೆಯಲ್ಲಿ ಹಿರಿಯ12 ಸದಸ್ಯರಿಗೆ ಗೌರವ ಅರ್ಪಣೆ, ಎಸೆಸೆಲ್ಸಿಯಲ್ಲಿ 85% ,ಪಿಯುಸಿಯಲ್ಲಿ ಶೇ.95% ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಧನದೊಂದಿಗೆ ಪ್ರತಿಭಾ ಪುರಸ್ಕಾರ ,ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 6 ಮಂದಿ ಸದಸ್ಯರಿಗೆ ಗೌರವಾರ್ಪಣೆ,ಗಾಯನ,ಭರತ ನಾಟ್ಯ ಮತ್ತು ಕರಾಟೆಯಲ್ಲಿ ಸಾಧನೆ ಮಾಡಿದ 3 ಮಂದಿಗೆ ಸನ್ಮಾನ ನಡೆಯಲಿದೆ.ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಕೆ. ಅವರು ತಿಳಿಸಿದ್ದಾರೆ.

ಸಭೆ ಸಮಾರಂಭಗಳಿಗೆ 400 ಆಸನಗಳುಳ್ಳ ರೈತಸ್ನೇಹಿ ಸಭಾಭವನ
ಸಭೆ ಸಮಾರಂಭಗಳಿಗೆ 400 ಆಸನಗಳುಳ್ಳ ರೈತಸ್ನೇಹಿ ಸಭಾಭವನದ ವ್ಯವಸ್ಥೆ ಇದೆ.ಅಲ್ಲದೇ ಶವ ದಹನ ಪೆಟ್ಟಿಗೆಯನ್ನು ಮಾಡಲಾಗಿದೆ.
ರೈತರ ಪಾಲಿಗೆ ವರದಾನವಾಗಿರುವ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಸಂಘದ 1852 ಸದಸ್ಯರು ರೂ. 52.50 ಲಕ್ಷ ಪ್ರೀಮಿಯಂ ಪಾವತಿಸಿದ್ದಾರೆ.

LEAVE A REPLY

Please enter your comment!
Please enter your name here