ಖ್ಯಾತ ಸ್ಯಾಕ್ಸೋಫೋನ್ ವಾದಕ ಎಂ. ವೇಣುಗೋಪಾಲ್ ಪುತ್ತೂರು ಅವರಿಗೆ ಯುವ ಸಂಗೀತಗಾರ ಪ್ರಶಸ್ತಿ

0

ಪುತ್ತೂರು: ಡಾ ಕೆ.ವಿ.ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ದೇವಾಡಿಗ ಸಮಾಜದ 11 ಮಂದಿ ಯುವ ಪ್ರತಿಭೆಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳೂರಿನ ಪ್ರಖ್ಯಾತ ನ್ಯೂರೋ ಸರ್ಜನ್ ಡಾ. ಕೆ.ವಿ.ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಸೆ.7 ರಂದು ದೇವಾಡಿಗ ಸಮಾಜ ಭವನ ಮಣ್ಣಗುಡ್ಡೆ ಮಂಗಳೂರು ಇಲ್ಲಿ ನಡೆಯಿತು.

ಸಮಾರಂಭದಲ್ಲಿ ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಸಂಗೀತಗಾರ ಪ್ರಶಸ್ತಿ 2025 ನ್ನು ಪುತ್ತೂರಿನ ಖ್ಯಾತ ಸ್ಯಾಕ್ಸೋಫೋನ್ ವಾದಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಎಂ. ವೇಣುಗೋಪಾಲ್ ಪುತ್ತೂರು ಇವರಿಗೆ ವೇದಿಕೆಯಲ್ಲಿದ್ದ ಗಣ್ಯರ ಸಮ್ಮುಖದಲ್ಲಿ ದುಬೈಯಲ್ಲಿರುವ ಎಸಿಎಂಇ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ಇದರ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ನೀಡಿ ಗೌರವಿಸಿದರು.

ಎಳವೆಯಲ್ಲಿಯೇ ಸ್ಯಾಕ್ಸೋಫೋನ್ ಕಛೇರಿ ನೀಡಲು ಪ್ರಾರಂಭಿಸಿದ ವರು, ತಾಲೂಕಿನ ಹಲವಾರು ದೇವಸ್ಥಾನ, ದೈವಸ್ಥಾನಗಳಲ್ಲಿ ಕಲಾಸೇವೆ ನೀಡುತ್ತಿದ್ದಾರೆ. ಆರಂಭದಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ವಿದ್ವಾನ್ ಪಿ.ಕೆ.ಗಣೇಶ್ ಇವರಿಂದ ಅಭ್ಯಾಸಿಸಿರುತ್ತಾರೆ. ನಂತರ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಬಳಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಅಭ್ಯಾಸ ಮಾಡಿರುತ್ತಾರೆ ಹಾಗೂ ಹಲವಾರು ಕಡೆ ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡುತಿದ್ದು, ಆಲ್ಬಂ ಸಾಂಗ್ ಗಳಿಗೂ ಸ್ಯಾಕ್ಸೋಫೋನ್ ನುಡಿಸಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.


ಇವರು ತಂದೆ ಉಮೇಶ್ ದೇವಾಡಿಗ (ಸ್ಯಾಕ್ಸೋಫೋನ್ ಮತ್ತು ಜಾನಪದ ನಾಗಸ್ವರ ಕಲಾವಿದರು) ತಾಯಿ ಸರಸ್ವತಿ, ಪತ್ನಿ ಹರ್ಷಿತಾ ದೇವಾಡಿಗ ಮತ್ತು ಮಗಳು ತಿಯಾಂಶಿ ಇವರೊಂದಿಗೆ ಬನ್ನೂರು ಮೇಲ್ಮಜಲಿನಲ್ಲಿ ಶ್ರೀಮಹಾ ನಿಲಯದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here