ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ಉಪ್ಪಿನಂಗಡಿಯು 2024-25ನೇ ಸಾಲಿನಲ್ಲಿ 572 ಕೋಟಿ ರೂ ವ್ಯವಹಾರ ನಡೆಸಿ 3.70 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ 16 ಡಿವಿಡೆಂಡ್ ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ಘೋಷಿಸಿದರು.
ಸೆ.7ರಂದು ನಡೆದ ಸಂಘದ ಮಹಾಸಭೆಯಲ್ಲಿ ಸದಸ್ಯರ ಅಗ್ರಹಕ್ಕೆ ಮಾನ್ಯತೆ ನೀಡಿ ಪ್ರಸ್ತಾವಿತ ಶೇ 13.5 ಡಿವಿಡೆಂಡ್ ಬದಲಾಗಿ ಶೇ. 16 ಡಿವಿಡೆಂಡ್ ನೀಡಲು ಒಪ್ಪಿಗೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಸಂಘವು ವಿವಿಧ ವ್ಯಾಪಾರಗಳಿಂದ 98.10 ಲಕ್ಷ ಲಾಭ ಗಳಿಸಿದೆ ಹಾಗೂ ಒಟ್ಟು ವ್ಯವಹಾರದಿಂದ 3,70,53,862.65 ರೂ. ಲಾಭಗಳಿಸಿದೆ. ನಮ್ಮ ಸಂಘದಲ್ಲಿ ವಷ್ಯಾಂತ್ಯಕ್ಕೆ 9091 ಸದಸ್ಯರಿದ್ದು, 10.11 ಕೋ.ರೂ. ಷೇರು ಬಂಡವಾಳವನ್ನು ಸಂಗ್ರಹಿಸಲಾಗಿದೆ. ವರದಿ ಸಾಲಿನಲ್ಲಿ ಸಂಘವು 99.51 ಕೋ. ರೂ. ಠೇವಣಿ ಹೊಂದಿದ್ದು, 156.51ಕೋ.ರೂ. ಹೊರಬಾಕಿ ಸಾಲ ಇರುತ್ತದೆ. ವರ್ಷಾಂತ್ಯದಲ್ಲಿ ಶೇ.96.16 ಸಾಲ ವಸೂಲಾತಿ ಆಗಿರುತ್ತದೆ. ಸಂಘದ ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 16.59 ಕೋ.ರೂ. ಇರುತ್ತದೆ. ಸಂಘವು ಒಟ್ಟು 368.65 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದೆ ಎಂದರು.
ಸುವರ್ಣ ಸಂಗಮ ನಿಧಿ’ ಸಂಘದ ಕೃಷಿ ಸಾಲಗಾರರಿಗೆ ಪಾಯಸ್’ (ವೈಯಕ್ತಿಕ ಅಪಘಾತ ವಿಮೆ) ಮತ್ತು ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆ, `ವಿದ್ಯಾಶ್ರೀ’ ಎಂಬ ಯೋಜನೆಗಳು ಜಾರಿಯಲ್ಲಿದೆ ಎಂದು ತಿಳಿಸಿದರು.
ಬಡ್ಡಿ ಸಹಾಯಧನದ ನಿಮಿತ್ತ ಸರಕಾರದಿಂದ ಬರಬೇಕಾದ 5.26 ಕೋಟಿ ರೂ. ಹಣವನ್ನು ಬರಿಸುವ ಬಗ್ಗೆ ಕ್ರಮ, ರಾಜ್ಯದ ಮುಖ್ಯ ಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿದಂತೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ , ಹಾಗೂ ಶೇ. 3 ರ ಬಡ್ಡಿ ದರದಲ್ಲಿ 15 ಲಕ್ಷ ಸಾಲ ದೊರಕುವಂತೆ ಸರಕಾರವನ್ನು ಒತ್ತಾಯಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು. ನಮ್ಮ ಸಂಘವು ರಸಗೊಬ್ಬರ ಕಂಪೆನಿಗಳ ಡೀಲರ್‌ಶಿಪ್ ಹೊಂದಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ವರ್ಷ ಸತತ ನಾಲ್ಕು ತಿಂಗಳು ಅತೀ ವೃಷ್ಠಿಯಾದ್ದರಿಂದ ಕೃಷಿಕರಿಗೆ ಭಾರೀ ನಷ್ಠ ಸಂಭವಿಸಿದ್ದು, ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಾಯಿಸಬೇಕೆಂದು ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ಸುರೇಶ್ ಅತ್ರೆಮಜಲು, ಲಕ್ಷ÷್ಮಣ್ ಗೌಡ ನೆಡ್ಚಿಲ್, ಲೋಕೇಶ್ ಬೆತ್ತೋಡಿ, ಪೆಲಪ್ಪಾರು ವೆಂಕಟರಮಣ ಭಟ್, ಚಂದ್ರಶೇಖರ್ ತಾಳ್ತಜೆ, ರವೀಂದ್ರ ಆಚಾರ್ಯ, ಗಂಗಾಧರ ನೆಕ್ಕರಾಜೆ, ಸಂತೋಷ್ ಕುಮಾರ್ ಪಂರ್ದಾಜೆ, ಯಶವಂತ್ ಜಿ, ರೂಪೇಶ್ ರೈ ಅಲಿಮಾರ್, ಜಯಂತ ಪೊರೋಳಿ, ಕೆ.ವಿ. ಪ್ರಸಾದ್, ಧರ್ಣಪ್ಪ ನಾಯ್ಕ್, ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು .
ಪ್ರಮುಖರಾದ ಮಾಜಿ ಶಾಸಕ ಸಂಜೀವ ಮಠಂದೂರು, ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್. ಗೋಪಾಲ ಹೆಗ್ಡೆ, ಚಂದ್ರಿಕಾ ಭಟ್, ಇಸುಬು ಯು. ಕೆ , ಅಸ್ಕರ್ ಅಲಿ, ಹೆನ್ರಿ ಜಾನ್ ಲೋಬೋ , ಜಾನಕಿ , ಕೈಲಾರ್ ರಾಜಗೋಪಾಲ ಭಟ್, ಶೇಖರ ಗೌಂಡತ್ತಿಗೆ, ಮಹೇಂದ್ರ ವರ್ಮ, ಹರಿರಾಮಚಂದ್ರ, ಅನುರಾಧಾ ಆರ್. ಶೆಟ್ಟಿ, ಮಾಧವಿ ರೈ, ರಾಮಚಂದ್ರ ಮಣಿಯಾಣಿ, ಶಂಕರನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಸರೋಳಿ, ನಿರ್ದೇಶಕರಾದ ರಾಜೇಶ್, ವಸಂತ ಪಿ., ರಾಘವ ನಾಯ್ಕ, ಸುಂದರ ಕೆ., ಶ್ರೀರಾಮ, ಅಗರ್ತ ಸುಬ್ರಹ್ಮಣ್ಯ ಕುಮಾರ್, ಗೀತಾ, ಸಂಧ್ಯಾ, ಉಷಾ ಮುಳಿಯ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪ್ರತಿನಿಧಿ ಶರತ್ ಡಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಎಚ್. ಉಪಸ್ಥಿತರಿದ್ದರು.