ಪುತ್ತೂರು: ಬಂಟ್ವಾಳ ತಾಲೂಕಿನ ಮುರುವ -ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಉದ್ಯೋಗಿ , ಇಲ್ಲಿನ ಕನ್ಯಾನ ನಿವಾಸಿ, ಮಥಾಯಿಸ್ ಡಿಸೋಜ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸೆ.7 ರಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಹಲೆನ್ ಮೊಂತೆರೋ ,ಪುತ್ರಿಯರಾದ ಇಸ್ರೇಲ್ ನಲ್ಲಿ ಉದ್ಯೋಗಿಯಾಗಿರುವ ಪ್ರಫುಲ್ಲಾ , ಇನ್ನೋರ್ವ ಪುತ್ರಿ ಮಂಗಳೂರಿನಲ್ಲಿ ಫಾರ್ಮಸಿಸ್ಟ್ ಆಗಿರುವ ಪವಿತ್ರ ಜನೆಟ್, ಹಾಗೂ ಪುತ್ರ , ಶ್ಯಾಡೋ ಫ್ಯಾಕ್ಸ್ ಟೆಕ್ನೋಲಜಿ ಸಂಸ್ಥೆಯ ಉದ್ಯೋಗಿ ಪ್ರಜ್ವಲ್ ಸಹಿತ ಕುಟುಂಬ ವರ್ಗವನ್ನು ಅಗಲಿದ್ದಾರೆ.
ಸೆ.10(ನಾಳೆ) ರಂದು ಮೃತರ ಅಂತಿಮ ಯಾತ್ರೆ….
ಸೆ.10 ರಂದು 12.30 ರಿಂದ ಸಂಜೆ ಗಂಟೆ 3ರ ವರೆಗೆ ಮೃತರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದ್ದು , ಬಳಿಕ ಕನ್ಯಾನ ವಿಜಯಡ್ಕ ಲಾರೆನ್ಸ್ ಚರ್ಚಿನಲ್ಲಿ ಅಂತಿಮ ವಿಧಿ ವಿಧಾನ ಕಾರ್ಯಕ್ರಮ ಜರುಗಲಿದೆಯೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.