ಕುಂಡಡ್ಕ ವಿಷ್ಣುನಗರದಲ್ಲಿ ರಸ್ತೆ ಕುಸಿತ – ಸಂಚಾರ ಸ್ಥಗಿತ

0

ವಿಟ್ಲ: ಕುಳ ಗ್ರಾಮದ ಕುಂಡಡ್ಕ ವಿಷ್ಣುನಗರ ಗಾಳಿಗುಡ್ಡೆ ಎಂಬಲ್ಲಿ ರಸ್ತೆ ಕುಸಿತದಿಂದ ಘನ ವಾಹನ ಸಂಚಾರ ಸ್ಥಗಿತಗೊಂಡಿದೆ.


ಕಬಕ – ಬದನಾಜೆ – ಬೇರಿಕೆ ಸಂಪರ್ಕ ರಸ್ತೆ ಇದಾಗಿದ್ದು, ಸೆ.9ರಂದು ಬೆಳಗ್ಗೆ ಅಲ್ಪ ಕುಸಿತಗೊಂಡಿದ್ದು, ಆ ಬಳಿಕ ದೊಡ್ಡ ಕಂದಕ ಸೃಷ್ಟಿಯಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ವೊಂದನ್ನು ಬಿಟ್ಟರೆ ಉಳಿದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಇಡ್ಕಿದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎ.ಬಿ. ಅಜಿತ್ ಕುಮಾರ್, ಸದಸ್ಯರಾದ ಪ್ರಶಾಂತ್‌ ಶೆಟ್ಟಿ ಬರೆ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಯಿಂದಾಗಿ ಈ ಮಾರ್ಗದಲ್ಲಿ ಘನ ವಾಹನ ಸಂಚಾರ ಸ್ಥಗಿತಗೊಂಡಿದೆ.

LEAVE A REPLY

Please enter your comment!
Please enter your name here