ಪುತ್ತೂರು: ಪುತ್ತೂರು ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನದ ಸಂಭ್ರಮಾಚರಣೆ ಅ.1ರಂದು ಆನಂದಾಶ್ರಮದ ವಠಾರದಲ್ಲಿ ನಡೆಯಲಿದೆ.
ಅಪರಾಹ್ನ ಗಂಟೆ 3-30ರಿಂದ 4-30 ‘ಸ್ವರಾನಂದ’ ಕುಮಾರಿ ವೈಷ್ಣವಿ ಭಟ್ ಮಂಗಳೂರು ಇವರಿಂದ ಸ್ಯಾಕ್ಟೋಪೋನ್ ವಾದನ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ ಗಂಟೆ 4-30ರಿಂದ 5-30 ಸಭಾ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು ಚೇತನಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ| ಜೆ. ಸಿ. ಅಡಿಗ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಅತಿಥಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಪಿ. ವಾಮನ ಪೈ ಹಾಗೂ ಬಂಟ್ವಾಳ ನಿವೃತ್ತ ನೇತ್ರಾಧಿಕಾರಿ ಎಸ್. ಶಾಂತರಾಜ್ ಗೌರವಿಸಲಾಗುತ್ತದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.