





ಪುತ್ತೂರು: ಪುತ್ತೂರಿನ ಹೆಚ್.ಪಿ.ಆರ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಸೆ.09 ರಂದು ಕೇರಳದ ಸಾಂಪ್ರದಾಯಿಕ ಹಬ್ಬವಾದ ಓಣಂ ಆಚರಣೆಯು ನಡೆಯಿತು.


ಅತಿಥಿಯಾಗಿ ಪುತ್ತೂರು ತಾಲೂಕು ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ವೀಣಾಭಾಸ್ಕರ್ ಓಣಂ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲೆಯಾದ ಇವ್ನೀಸ್ ಡಿಸೋಜಾ ಮತ್ತು ಉಪಪ್ರಾಂಶುಪಾಲೆಯಾದ ಜಲಜ ಎಸ್.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಚೆಂಡೆಮೇಳ ಕಾರ್ಯಕ್ರಮ ನಡೆಯಿತು. ಹಾಗೂ ಓಣಂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಂತರ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮವು ನೆರವೇರಿತು. ವಿದ್ಯಾರ್ಥಿನಿಯರಾದ ಸಫ್ನಾಜ್ ಸ್ವಾಗತಿಸಿ, ಆನ್ಸಿ ವಂದಿಸಿದರು. ಮತ್ತು ಅಶ್ವಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.















