ಸೆ.14 : ಪುತ್ತೂರು ತುಳುಕೂಟದಿಂದ ಜಿ.ಎಲ್.ವನ್ ಮಾಲ್’ನಲ್ಲಿ ಪುದ್ವರ್ ಉಣಸ್

0

ಪುತ್ತೂರು: ಪುತ್ತೂರು ತುಳುಕೂಟದ ವತಿಯಿಂದ ತುಳುವರ ಸಾಂಪ್ರದಾಯಿಕ ಹೊಸ ಅಕ್ಕಿ ಊಟ ಈ ಬಾರಿ ಜಿ.ಎಲ್.ವನ್ ಮಾಲ್’ನ ಒಂದನೇ ಮಹಡಿಯ ಸಭಾಂಗಣದಲ್ಲಿ ಸೆಪ್ಟೆಂಬರ್ 14 ರಂದು ಮಧ್ಯಾಹ್ನ ಜರಗಲಿದ್ದು ಸಂತ ಫಿಲೊಮಿನಾ ಕಾಲೇಜಿನ ಉಪನ್ಯಾಸಕ ಪ್ರಶಾಂತ್ ರೈ ಮುಂಡಾಲಗುತ್ತು ಉಪನ್ಯಾಸ ನೀಡಲಿದ್ದಾರೆ.

ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್ ಎಮ್ ಗಂಗಾಧರ ರೈ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ನೇಗಿಲು ಮತ್ತು ನೊಗದ ವಿಷಯದಲ್ಲಿ ರಸಪ್ರಶ್ನೆ ಇರಲಿದ್ದು ಸಭಾ ಕಾರ್ಯಕ್ರಮದ ನಂತರ ಪುದ್ವರ್ ಉಣಸ್ (ಊಟ) ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದೆಂದು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಮತ್ತು ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here