ಆಲಂಕಾರು: ಸಂಸದ ಬ್ರಿಜೇಶ್ ಚೌಟ,ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಹೊಸ್ಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ
ಭೇಟಿ ನೀಡಿ ಸಂಘದ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು.
ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ದೇವಾಡಿಗ ಸ್ವಾಗತಿಸಿ, ಸಂಸದರನ್ನು ಮತ್ತು ಶಾಸಕರನ್ನು ಗೌರವಿಸಿದರು.ಈ ಸಂಧರ್ಭದಲ್ಲಿ ಹೊಸ್ಮಠ. ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಚಿದಾನಂದ ಕೊಡೆಂಕಿರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿ, ನಿರ್ದೇಶಕರುಗಳಾದ ಶಿವಪ್ರಸಾದ್ ಪುತ್ತಿಲ, ಶಶಾಂಕ್ ಗೋಖಲೆ, ಶಿವಪ್ರಸಾದ್ ರೈ ಮೈಲೇರಿ, ಅಚ್ಚುತ ದೇರಾಜೆ, ಯೋಗೇಂದ್ರ ಬನಾರಿ, ಪಕೀರ, ಶ್ರೀಮತಿ ಶಕೀಲಾ, ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ದ. ಕ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶ್ರೀ ಕೃಷ್ಣ ಎಂ ಆರ್, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.