ಯರ್ಮುಂಜಪಳ್ಳ ಅಶ್ವತ್ಥ ಕಟ್ಟೆ ದೇವತಾ ಸಮಿತಿ, ಧೂಮಾವತಿ ಯುವಕ ಮಂಡಲದ ಮಾದರಿ ಕಾರ್ಯ – ಸಂಘದ ಸದಸ್ಯರೊಬ್ಬರ ಚಿಕಿತ್ಸೆಗಾಗಿ ಆರ್ಥಿಕ ನೆರವು ಹಸ್ತಾಂತರ

0

ಪುತ್ತೂರು: ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ವಿಚಾರದಲ್ಲಿ ಚಟುವಟಿಕೆಯಲ್ಲಿರುವ ಪಡ್ನೂರು ಯರ್ಮುಂಜಪಳ್ಳ ಅಶ್ವತ್ಥಕಟ್ಟೆ ದೇವತಾ ಸಮಿತಿ, ಧೂಮಾವತಿ ಯುವಕ ಮಂಡಲದ ಸದಸ್ಯರೊಬ್ಬರ ಅನಾರೋಗ್ಯದ ಚಿಕಿತ್ಸೆಯ ವೆಚ್ಚವಾಗಿ ಆರ್ಥಿಕ ನೆರವನ್ನು ಹಸ್ತಾಂತರಿಸುವ ಮೂಲಕ ಸಂಘಟನೆಯೊಂದು ಎಲ್ಲರಿಗೂ ಮಾದರಿಯಾಗಿದೆ.


ಧೂಮಾವತಿ ಯುವಕ ಮಂಡಲದ ಸದಸ್ಯರಾದ ರಮೇಶ್ ಗೌಡ ಯರ್ಮುಂಜಪಳ್ಳ ಇವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕುರಿತು ಸಂಘದ ಸದಸ್ಯರು ಅವರ ಚಿಕಿತ್ಸೆ ವೆಚ್ಚವಾಗಿ ರೂ. 17 ಸಾವಿರ ನಗದನ್ನು ಸಂಘದ ಪರವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸಮಿತಿ ಗೌರವ ಸಲಹೆಗಾರರು ಆಗಿರುವ ಈಶ್ವರ ಭಟ್ ಪಂಜಿಗುಡ್ಡೆಯವರು ಅಶ್ವತ್ಥ ಕಟ್ಟೆ ಮುಂದೆ ಹಸ್ತಾಂತರಿಸಿದರು. ಆರಂಭದಲ್ಲಿ ರಮೇಶ್ ಗೌಡ ಅವರು ಶೀಘ್ರ ಗುಣಮುಖರಾಗುವಂತೆ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಬಳಿಕ ಆರ್ಥಿಕ ನೆರವನ್ನು ರಮೇಶ್ ಗೌಡ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಗಿರಿಯಪ್ಪ ಪೂಜಾರಿ ಅಂಡೆಪುಣಿ, ಶೀನಪ್ಪ ಪೂಜಾರಿ ಮಾವಿನಕಟ್ಟೆ, ಜಯಂತ ಎರ್ಮುಂಜಪಲ್ಲ, ರೋಹನ್‌ರಾಜ್ ಮಾವಿನಕಟ್ಟೆ, ಮೋಹನ್ ಗೌಡ ವಾಳ್ತಾಜೆ, ಮನೋಜ್ ನಾಯ್ಕ್ ಪಂಜಿಗುಡ್ಡೆ, ಕಾವ್ಯಶ್ರೀ ಪಡ್ನೂರು, ಶೀನ ಮುಂಡಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here