ಕಟ್ಟತ್ತಾರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಬಿ ಅಬೂಬಕ್ಕರ್ ಪುನರಾಯ್ಕೆ

0

ಪುತ್ತೂರು: ಕಟ್ಟತ್ತಾರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಬಿ ಅಬೂಬಕ್ಕರ್ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಹಾಜಿ ಉಮ್ಮರ್ ಮುಸ್ಲಿಯಾರ್ ನಂಜೆ, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಅಂಗಡಿ, ಜೊತೆ ಕಾರ್ಯದರ್ಶಿಯಾಗಿ ಕೆ.ಎಂ ಶರೀಫ್ ಕಟ್ಟತ್ತಾರು ಹಾಗೂ ಇಸ್ಮಾಯಿಲ್ ಮಾಸ್ಟರ್ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರುಗಳಾಗಿ ಬಿ.ಎಂ ಉಮ್ಮರ್ ಹಾಜಿ, ಕೆ.ಎಂ ಅಶ್ರಫ್ ಕಟ್ಟತ್ತಾರು, ಕೆ.ಎಚ್ ಆರಿಫ್ ಕಟ್ಟತ್ತಾರು, ಕೆ.ಪಿ ಅಶ್ರಫ್ ಕಟ್ಟತ್ತಾರು, ಟಿ.ಎಂ ಯೂಸುಫ್ ಕಟ್ಟತ್ತಾರು ಆಯ್ಕೆಗೊಂಡಿದ್ದಾರೆ.

ಕಟ್ಟತ್ತಾರು ಮಸೀದಿಯಲ್ಲಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಜಮಾಅತ್ ಕಮಿಟಿಯ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರು ಕಳೆದ 41 ವರ್ಷಗಳಿಂದ ಕಟ್ಟತ್ತಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾತೀಬು ನೇರ್ಚೆ:
ಮಹಾ ಸಭೆಯ ಮೊದಲು ಮಸೀದಿಯ ಖತೀಬರಾದ ಉಮ್ಮರ್ ಮದನಿ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ರಾತೀಬ್ ನೇರ್ಚೆ ನಡೆಯಿತು. ಇಸ್ಮಾಯಿಲ್ ತಂಙಳ್ ಮಾಡಾವು ದುವಾ ನೆರವೇರಿಸಿದರು. ಸದರ್ ಉಸ್ತಾದ್ ಶಬ್ಬೀರ್ ಅಝ್‌ಹರಿ, ಮುಅಝ್ಝಿನ್ ರಝಾಕ್ ಹಿಮಮಿ ಹಾಗೂ ಮುಅಲ್ಲಿಂ ಹಸೈನಾರ್ ಮುಸ್ಲಿಯಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here