ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿ, ಶುಗರ್, HBA1C, ಕ್ಯಾಲ್ಸಿಯಂ, ಬಿಎಂಡಿ, ನ್ಯುರೋಪಥಿ, ಯೂರಿಕ್ ಆಸಿಡ್, ಕೊಲೆಸ್ಟ್ರಾಲ್ ಉಚಿತ ತಪಾಸಣೆ

0

ಪುತ್ತೂರು: ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬೆಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್  ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ, ಶುಗರ್(GRBS),HBA1C, ಕೊಲೆಸ್ಟ್ರಾಲ್, ಬಿಎಂಡಿ, ನ್ಯುರೋಪಥಿ, ಕ್ಯಾಲ್ಸಿಯಂ, ಕೊಲೆಸ್ಟ್ರಾಲ್ ಉಚಿತ ತಪಾಸಣೆಯು ಸೆ.17ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ|ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಡಾ.ನಝೀರ್ ಅಹಮ್ಮದ್ ರವರಲ್ಲಿ ಸಲಹೆ ಪಡೆದುಕೊಂಡರು.

ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ನ ಡಾ.ನಝೀರ್ ಅಹಮದ್ ರವರು ಸ್ವಾಗತಿಸಿ, ವರ್ಷಂಪ್ರತಿ ಕ್ಲಿನಿಕ್ ನಲ್ಲಿ ವಿವಿಧ ರೀತಿಯ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು ಪ್ರಸ್ತುತ ವರ್ಷವೂ ಕ್ಲಬ್ ನ ಸಹಯೋಗದೊಂದಿಗೆ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ವಿವಿಧ ಕಂಪೆನಿಗಳ ಸಹಕಾರದೊಂದಿಗೆ ಪುತ್ತೂರಿನ ಫಲಾನುಭವಿಗಳಿಗೆ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಕ್ಲಿನಿಕ್ ಹಮ್ಮಿಕೊಳ್ಳುವ ಈ ಆರೋಗ್ಯ ಶಿಬಿರಗಳಿಗೆ ಫಲಾನುಭವಿಗಳು ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬೇಕಾಗಿ ಹೇಳಿ  ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ, ರೋಟರ್ಯಾಕ್ಟ್ ಪುತ್ತೂರು ಪದಾಧಿಕಾರಿಗಳಾದ ನವೀನಚಂದ್ರ, ನವನೀತ್, ಸುಶಾಂತ್, ಹರ್ಷಿತ್ ರವರು ಉಪಸ್ಥಿತರಿದ್ದರು. ಟೊರೆಂಟ್ ಕಂಪೆನಿಯ ಚೇತನ್ ಶೆಟ್ಟಿ ಹಾಗೂ ವಿಶ್ವ, ಅಬೋಟ್ ಕಂಪೆನಿಯ ರಕ್ಷಿತ್ ಮತ್ತು ಕಾರ್ತೀಕ್, ಸಿಸ್ಟೋಫಿಕ್ ಕಂಪನಿಯ ದೀಪಕ್, ಇಂಟಾಸ್ ಕಂಪೆನಿಯ ಚರಣ್ ಮತ್ತು ವಿನಯ್, ಸನ್ ಫಾರ್ಮಾ ಕಂಪೆನಿಯ ಪ್ರೀತಂ, ಎಮ್ಕ್ಯೂರ್ ಕಂಪೆನಿಯ ಪ್ರದೀಪ್, ಲಾಲ್ ಪತ್ಲ್ಯಾಬ್, , ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್ ನ ಸಿಬ್ಬಂದಿ ಸಹಕರಿಸಿದರು.

ಪಾಲ್ಗೊಂಡ ಫಲಾನುಭವಿಗಳು..

ಥೈರಾಯಿಡ್-75 ಮಂದಿ

HBA1C-45 ಮಂದಿ

ಮಧುಮೇಹ-86 ಮಂದಿ

ಬಿಎಂಡಿ-64 ಮಂದಿ

ನ್ಯುರೋಪಥಿ-56 ಮಂದಿ

ಯೂರಿಕ್ ಆಸಿಡ್-60 ಮಂದಿ

ಕ್ಯಾಲ್ಸಿಯಂ-74 ಮಂದಿ

ಕೊಲೆಸ್ಟ್ರಾಲ್-71 ಮಂದಿ

LEAVE A REPLY

Please enter your comment!
Please enter your name here